Saturday, February 24, 2018

ಇಂದಿನ ಇತಿಹಾಸ History Today ಫೆಬ್ರುವರಿ 24

ಇಂದಿನ ಇತಿಹಾಸ History Today ಫೆಬ್ರುವರಿ 24

2018: ಮೆಲ್ಬೋರ್ನ್: ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಕಂಚನ್ನು ಗೆಲ್ಲುವ ಮೂಲಕ ವಿಶ್ವ ಕಪ್ಜಿಮ್ನಾಸ್ಟಿಕ್ಸ್ನಲ್ಲಿ  ಪದಕ ಗೆದ್ದ ಮೊದಲ ಭಾರತೀಯ ವನಿತಾ ಜಿಮ್ನಾಸ್ಟ್ಆಗಿ ಅರುಣಾ ಬುಡ್ಡ ರೆಡ್ಡಿ ಮಹೋನ್ನತ ಐತಿಹಾಸಿಕ ಸಾಧನೆ ಮಾಡಿದರು. 22 ಹರೆಯದ ರೆಡ್ಡಿ ಅವರು ಹೈದರಾಬಾದ್ನವರು. ಹೀಸೆನ್ಸ್ಅರೇನಾದಲ್ಲಿ ಇವರು 13.649 ಸರಾಸರಿ ಅಂಕಗಳನ್ನು ಸಾಧಿಸುವ ಮೂಲಕ ಕಂಚಿನ ಪದಕ ಗೆದ್ದರುಸ್ಲೊವಾನಿಯಾದ  ತಾಸಾ ಕೈಸೆಲ್ಫ್ ಅವರು 13.800 ಅಂಕ ಗಳಿಸಿ ಚಿನ್ನದ ಪದಕ ಗೆದ್ದರು. ಆಸ್ಟ್ರೇಲಿಯದ ಎಮಿಲಿ ವೈಟ್ಹೆಡ್ಅವರು 13.699 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದರುಅಂತಿಮ ಸುತ್ತಿಗೆ ತೇರ್ಗಡೆಯಾಗಿ ಬಂದಿದ್ದ ಇನ್ನೋರ್ವ ಭಾರತೀಯ ಮಹಿಳೆ, ಪ್ರಣತೀ ನಾಯಕ್ಅವರು 13.416 ಅಂಕ ಗಳಿಸಿ ಆರನೇ ಸ್ಥಾನಿಯಾದರುವಿಶ್ವ ಕಪ್ಜಿಮ್ನಾಸ್ಟ್ನಲ್ಲಿ ಪದಕ ಗೆದ್ದ ಮೊತ್ತ ಮೊದಲ ಭಾರತೀಯ ಮಹಿಳೆಯಾಗಿ ಅರುಣಾ ರೆಡ್ಡಿ ಐತಿಹಾಸಿಕ ಸಾಧನೆ ಮಾಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ಭಾರತದ ಜಿಮ್ನಾಸ್ಟಿಕ್ಸ್ಒಕ್ಕೂಟದ ಕಾರ್ಯದರ್ಶಿಯಾಗಿರುವ ಶಾಂತಿ ಕುಮಾರ್ಸಿಂಗ್ಹೇಳಿದರು.  2016 ರಯೋ ಒಲಿಂಪಿಕ್ಸ್ನಲ್ಲಿ ವನಿತೆಯರ ವೋಲ್ಟ್ ವಿಭಾಗದಲ್ಲಿ ನಾಲ್ಕನೇ ಸ್ಥಾನಿಯಾಗಿದ್ದ ದೀಪಾ ಕರ್ಮಾಕರ್ಅವರು ಏಶ್ಯನ್ಚಾಂಪ್ಯನ್ಶಿಪ್ನಲ್ಲಿ ಮತ್ತು  2014 ಕಾಮನ್ವೆಲ್ತ್ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದಿದರು; ಆದರೆ ವಿಶ್ವ ಕಪ್ಮಟ್ಟದಲ್ಲಿ ಯಾವುದೇ ಸಾಧನೆ ಮಾಡಿರಲಿಲ್ಲ

2018: ಮುಂಬೈ / ನವದೆಹಲಿ:  ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನಡೆದ ೧೧,೪೦೦ ಕೋಟಿ ರೂಪಾಯಿ ವಂಚನೆ ಹಗರಣ ಆರೋಪದ ಹಿನ್ನೆಲೆಯಲ್ಲಿ ವಜ್ರ ವ್ಯಾಪಾರೋದ್ಯಮಿ ನೀರವ್ ಮೋದಿ ಮತ್ತು ಅವರ ಸಮೂಹಕ್ಕೆ ಸೇರಿದ ಪೆಂಟ್ ಹೌಸ್ ಮತ್ತು ಫಾರ್ಮ್ ಹೌಸ್ ಸೇರಿದಂತೆ ಒಟ್ಟು ೫೨೩ ಕೋಟಿ ರೂಪಾಯಿ ಮೌಲ್ಯದ ೨೧ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯವು (ಇಡಿ) ಜಪ್ತಿ ಮಾಡಿತು. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ) ಅಡಿಯಲ್ಲಿ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತಾನು ತಾತ್ಕಾಲಿಕ ಆದೇಶವನ್ನು ಹೊರಡಿಸಿದ್ದು, ಮೂರು ಫ್ಲಾಟುಗಳನ್ನು ಒಗ್ಗೂಡಿಸಿ ಸೃಷ್ಟಿಸಲಾದ ೮೧.೧೬ ಕೋಟಿ ರೂಪಾಯಿ ಮೌಲ್ಯದ ಪೆಂಟ್ ಹೌಸ್ ಮತ್ತು ಮುಂಬೈಯ ವರ್ಲಿ ಪ್ರದೇಶದಲ್ಲಿ ಸಮುದ್ರದತ್ತ ಮುಖ ಮಾಡಿದ ೧೫.೪೫ ಕೋಟಿ ರೂಪಾಯಿ ಮೌಲ್ಯದ ಸಮುದ್ರ ಮಹಲ್ ಫ್ಲಾಟನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿತು.  ನೀರವ್ ಮೋದಿ ಮತ್ತು ಅವರ ನಿಯಂತ್ರಣದಲ್ಲಿರುವ ಕಂಪೆನಿಗಳಿಗೆ ಸೇರಿದ ೫೨೩.೭೨ ಕೋಟಿ ರೂಪಾಯಿ ಮೌಲ್ಯದ ೨೧ ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇವುಗಳಲ್ಲಿ ವಸತಿ ಸ್ವತ್ತುಗಳು, ಪುಣೆಯಲ್ಲಿನ ೧೦ ಕಚೇರಿ ಆವರಣಗಳು, ಪುಣೆಯಲ್ಲಿನ ಎರಡು ಫ್ಲ್ಯಾಟುಗಳು, ಅಹಮದ್ ನಗರ ಜಿಲ್ಲೆಯ ಕರ್ಜಾಟ್ ಪ್ರದೇಶದಲ್ಲಿನ ೭೦ ಕೋಟಿ ರೂಪಾಯಿ ಮೌಲ್ಯದ ೫೩ ಎಕರೆ ಪ್ರದೇಶದ ಒಂದು ಸೌರ ವಿದ್ಯುತ್ ಘಟಕ, ಅಲಿಬಾಗ್ ಸಮುದ್ರ ತೀರದ ಕಿಹಿಮ್ ಪ್ರದೇಶದಲ್ಲಿನ ಫಾರ್ಮ್ ಹೌಸ್ ಮತ್ತು ಸನಿಹದ ೪೨.೭೦ ಕೋಟಿ ರೂಪಾಯಿ ಮೌಲ್ಯದ ಭೂಮಿ ಮುಟ್ಟುಗೋಲು ಹಾಕಿಕೊಳ್ಳಲಾದ ಸ್ವತ್ತುಗಳಲ್ಲಿ ಸೇರಿವೆ. ಅಹಮದ್ ನಗರ ಜಿಲ್ಲೆಯ ಕರ್ಜಾಟ್ ನಲ್ಲಿ ಮೋದಿ ಟ್ರಸ್ಟ್ ಮತ್ತು ೧೩೫ ಎಕರೆ ಭೂಮಿ ಕೂಡಾ ಮುಟ್ಟುಗೋಲು ಹಾಕಿಕೊಳ್ಳಲಾದ ಸ್ವತ್ತುಗಳಲ್ಲಿ ಸೇರಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿತು.  ಇದಕ್ಕೆ ಮುನ್ನ, ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡ ಬಳಿಕ ಫೆಬ್ರುವರಿ ೧೪ರಂದು ಮುತ್ತು, ರತ್ನ, ವಜ್ರ, ಚಿನ್ನಾಭರಣ, ಶೇರುಗಳು, ಬ್ಯಾಂಕ್ ಠೇವಣಿಗಳು ಮತ್ತು ದುಬಾರಿ ಕಾರುಗಳು ಇತ್ಯಾದಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಜಾರಿನಿರ್ದೇಶನಾಲಯ ಕೈಗೊಂಡ ಕ್ರಮಗಳಲ್ಲಿ ಈದಿನದ  ಕ್ರಮವೇ ಮೊತ್ತ ಮೊದಲನೆಯ ಕ್ರಮವಾಗಿತ್ತು ಸಮುದ್ರಮಹಲ್ ಸ್ವತ್ತುಗಳು ಮತ್ತು ಪುಣೆಯ ಹದಾಪ್ಸರ್ ಪ್ರದೇಶದ ಎರಡು ಫ್ಲಾಟುಗಳು ನೀರವ್ ಮೋದಿ ಮತ್ತು ಅವರ ಪತ್ನಿ ಅಮಿ ಹೆಸರಿನಲ್ಲಿ ಇದ್ದವು. ಮುಟ್ಟುಗೋಲು ಹಾಕಿಕೊಳ್ಳಲಾದ ಮುಂಬೈಯ ಒಪೇರಾ ಹೌಸ್ ಮತ್ತು ಕಲಾಘೋಡ ಸ್ವತ್ತುಗಳು ಮೋದಿ ಅವರ ಫೈರ್ ಸ್ಟಾರ್ ಡೈಮಂಡ್ ಇಂಟರ್ ನ್ಯಾಷನಲ್ ಹೆಸರಿನಲ್ಲಿ ಇದ್ದವು.  ೮೦ ಕೋಟಿ ರೂಪಾಯಿ ಮೌಲ್ಯದ ಎರಡು ಕಚೇರಿ ಸ್ವತ್ತುಗಳು ಮುಂಬೈಯ ಲೋವರ್ ಪರೇಲ್ ಪ್ರದೇಶದಲ್ಲಿನ ಮಾರ್ಕ್ ಬಿಸಿನೆಸ್ ಎಂಟರ್ ಪ್ರೈಸಸ್ ಹೆಸರಿನಲ್ಲಿದ್ದು ಅವುಗಳನ್ನೂ ಜಪ್ತಿ ಮಾಡಲಾಯಿತು.  ಈದಿನದ ಕ್ರಮದೊಂದಿಗೆ ಈವರೆಗೆ ಜಾರಿ ನಿರ್ದೇಶನಾಲಯವು ಒಟ್ಟು ,೩೯೩ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಂಡಂತಾಗಿದೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ವಿಚಾರಣೆ ಸಲುವಾಗಿ ಫೆಬ್ರುವರಿ ೨೬ರಂದು ತನ್ನ ಮುಂದೆ ಹಾಜರಾಗುವಂತೆ ನೀರವ್ ಮೋದಿ, ಅಮಿ ಮತ್ತು ಮೋದಿ ಚಿಕ್ಕಪ್ಪ ಹಾಗೂ ಗೀತಾಂಜಲಿ ಜೆಮ್ಸ್ ಪ್ರವರ್ತಕ ಮೆಹುಲ್ ಚೊಕ್ಸಿ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು.  ಬ್ಯಾಂಕಿಗೆ ಕೆಲವು ನೌಕರರ ಶಾಮೀಲಿನೊಂದಿಗೆ ೧೧,೪೦೦ ಕೋಟಿ ರೂಪಾಯಿ ಮೊತ್ತದ ವಂಚನೆ ಎಸಗಲಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ದೂರು ನೀಡಿದ ಬಳಿಕ ಜಾರಿ ನಿರ್ದೇಶನಾಲಯವು ಮೋದಿ, ಚೋಕ್ಸಿ ಮತ್ತಿತರರ ವಿರುದ್ಧ ವ್ಯಾಪಕ ತನಿಖೆ ಆರಂಭಿಸಿತ್ತು. ಮೋದಿ ಮತ್ತು ಚೋಕ್ಸಿ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಎರಡು ಎಫ್ ಐಆರ್ ಗಳನ್ನು ದಾಖಲಿಸಿದ್ದವು.  ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗುವುದಕ್ಕೆ ಮುನ್ನವೇ ಮೋದಿ ಮತ್ತು ಚೋಕ್ಸಿ ದೇಶ ತ್ಯಜಿಸಿದ್ದರು.

2018: ಮುಂಬೈ: ತಮ್ಮ ಹಾಗೂ ಸಹೋದರ ಸಂಬಂಧಿ ನೀರವ್ ಮೋದಿ ಅವರ ಸುತ್ತ ಹೆಣೆದುಕೊಂಡಿರುವ ಹಗರಣದ ಹಿನ್ನೆಲೆಯಲ್ಲಿ ಬೇರೆ ಉದ್ಯೋಗ ಹುಡುಕಿಕೊಳ್ಳುವಂತೆ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಭಾರತದಲ್ಲಿನ ತನ್ನ ಕಂಪೆನಿ ನೌಕರರಿಗೆ ಪತ್ರ ಬರೆದು ಸೂಚಿಸಿದರು. ನೀರವ್ ಮೋದಿ ಮತ್ತು ಚೋಕ್ಸಿ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ ಕ್ರಿಮಿನಲ್ ವಂಚನೆ ಖಟ್ಲೆಗಳನ್ನು ದಾಖಲಿಸಿ ತನಿಖೆ ನಡೆಸುತ್ತಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಆಪಾದಿಸಲಾಗಿರುವ ಋಣ ಪತ್ರ ವಂಚನೆ ಹಗರಣದ (ಲೆಟರ್ ಆಫ್ ಅಂಡರ್ ಟೇಕಿಂಗ್) ಬಗ್ಗೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಇದೀಗ ತನಿಖೆ ತೀವ್ರಗೊಳಿಸಿದ್ದವು.  ಚೋಕ್ಸಿ ಅವರ ವಕೀಲ ಸಂಜಯ್ ಅಬ್ಬೊಟ್ ಅವರು ಚೊಕ್ಸಿ ಅವರು ನೌಕರರಿಗೆ ಪತ್ರ ಬರೆದಿರುವುದನ್ನು ದೃಢ ಪಡಿಸಿದರು. ಇಂಗ್ಲಿಷ್ ನಲ್ಲಿ ಬರೆಯಲಾಗಿರುವ ಪತ್ರ ಎರಡು ಪುಟಗಳಷ್ಟಿದ್ದು, ತನಿಖಾ ಸಂಸ್ಥೆಗಳು ಆರೋಪಿಗಳಿಗೆ ಸೇರಿದ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿರುವ ಬಗ್ಗೆ ಉಲ್ಲೇಖಿಸಿತ್ತು. ತಮ್ಮ ವಿರುದ್ದ ಮಾಡಲಾಗಿರುವ ಎಲ್ಲ ಆಪಾದನೆಗಳನ್ನೂ ಸುಳ್ಳು ಆರೋಪಗಳು ಎಂಬುದಾಗಿ ಪತ್ರ ಹೇಳಿತು.  ಮೊದಲನೆಯದಾಗಿ ವೇತನ ಪಾವತಿ ಬಗ್ಗೆ ಖಾತ್ರಿ ಇಲ್ಲದೇ ಇರುವುದರಿಂದ, ಎರಡನೆಯದಾಗಿ ಕಚೇರಿ ನಡೆಸಲು ವಿದ್ಯುತ್ ಮತ್ತು ನಿರ್ವಹಣಾ ವೆಚ್ಚಗಳನ್ನು ಭರಿಸುವ ಖಾತ್ರಿ ಇಲ್ಲದೇ ಇರುವುದರಿಂದ, ಮೂರನೇಯದಾಗಿ ನನ್ನ ಜೊತೆಗಿನ ಸಂಪರ್ಕ / ಒಡನಾಟದ ಕಾರಣಕ್ಕಾಗಿ ಯಾರೊಬ್ಬರೂ ತೊಂದರೆಗೆ ಈಡಾಗಲು ನಾನು ಬಯಸುವುದಿಲ್ಲವಾದ್ದರಿಂದ, ಬೇರೆಲ್ಲಾದರೂ ಉದ್ಯೋಗಾವಕಾಶಗಳನ್ನು ಹುಡುಕಿಕೊಳ್ಳಿ ಎಂಬುದಾಗಿ ನಿಮ್ಮೆಲ್ಲರಿಗೂ ಮನವಿ ಮಾಡುವೆ ಎಂದು ಚೋಕ್ಸಿ ಪತ್ರದಲ್ಲಿ ತಿಳಿಸಿದರು. ಅಗತ್ಯವುಳ್ಳ ನೌಕರರಿಗೆ ಅನುಭವ ಪತ್ರ ಮತ್ತು ನೌಕರಿ ಬಿಡುಗಡೆ ಪತ್ರಗಳನ್ನು ನೀಡುವಂತೆ ಮಾನವ ಸಂಪನ್ಮೂಲ ಇಲಾಖೆಗೆ ಸೂಚನೆ ನೀಡಲಾಗುತ್ತಿದೆ ಎಂದು ಹೇಳಿರುವ ಪತ್ರ ನಿಮ್ಮ ಹಳೆಯ ಬಾಕಿ ಏನಾದರೂ ಇದ್ದಲ್ಲಿ, ಪರಿಸ್ಥಿತಿ ಮಾಮೂಲಿಗೆ ಹಿಂತಿರುಗಿದ ಬಳಿಕ ತೀರಿಸಲು ನಾನು ಬದ್ಧನಾಗಿದ್ದೇನೆ ಎಂದು ಪುನರುಚ್ಚರಿಸುವೆ ಎಂದೂ ಚೋಕ್ಸಿ ಪತ್ರದಲ್ಲಿ ಬರೆದರು. ಜಾರಿ ನಿರ್ದೇಶನಾಲಯವು ಚೋಕ್ಸಿ ಮತ್ತು ನೀರವ್ ಮೋದಿ ಅವರಿಗೆ ಸೇರಿದ ,೮೭೦ ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳನ್ನು ದೇಶಾದ್ಯಂತ ೧೯೨ ಸ್ಥಳಗಳಿಂದ ವಶ ಪಡಿಸಿಕೊಂಡಿತ್ತು.

2018: ನವದೆಹಲಿ: ವಜ್ರಾಭರಣ ಕ್ಷೇತ್ರದಲ್ಲಿ ನಡೆದಿರುವ ಇನ್ನೊಂದು ಭಾರಿ ವಂಚನೆ ಹಗರಣ ಬೆಳಕಿಗೆ ಬಂದಿತು.  ದೆಹಲಿಯ ವಜ್ರಾಭರಣ ಕಂಪೆನಿಯೊಂದರಿಂದ ತನಗೆ ೩೮೯.೮೫ ಕೋಟಿ ರೂಪಾಯಿ.ಗಳ ಸಾಲ ವಂಚನೆಯಾಗಿದೆ ಎಂಬುದಾಗಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ದೂರು ನೀಡಿದ ಆರು ತಿಂಗಳ ಬಳಿಕ, ಸಿಬಿಐ ಈದಿನ ದಿಢೀರನೆ ಪ್ರಕರಣ ದಾಖಲಿಸಿಕೊಂಡಿತು.  ದೆಹಲಿಯ ಕರೋಲ್ ಬಾಗ್ನಲ್ಲಿರುವ ದ್ವಾರಕಾದಾಸ್ ಸೇಠ್  ಇಂಟರ್ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವಿರುದ್ಧ ಸಿಬಿಐ, ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ಗೆ ೩೮೯.೮೫ ಕೋಟಿ ರೂಪಾಯಿಗಳ ಸಾಲ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಿತು. ವಿದೇಶಕ್ಕೆ ಪಲಾಯನ ಮಾಡಿರುವ ಕೋಟ್ಯಧೀಶ ವಜ್ರಾಭರಣ ವ್ಯಾಪಾರೋದ್ಯಮಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ  ಅವರು ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ೧೧,೩೦೦ ಕೋಟಿ ರೂಪಾಯಿ ಸಾಲ ವಂಚನೆ ಮಾಡಿರುವುದರ ವಿರುದ್ಧ ಕುಣಿಕೆ ಬಿಗಿಯುತ್ತಿರುವ ಸಿಬಿಐ ಹಿನ್ನೆಲೆಯಲ್ಲೇ ಓರಿಯಂಟಲ್ ಬ್ಯಾಂಕ್ ಪ್ರಕರಣದ ಬಗೆಗೂ ಚುರುಕಾಯಿತು.  ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ತನಗೆ ದೆಹಲಿಯ ವಜ್ರಾಭರಣ ಉದ್ಯಮ ಸಂಸ್ಥೆಯು ೩೮೯.೮೫ ಕೋಟಿ ರೂಪಾಯಿ ಸಾಲ ವಂಚನೆಯಾಗಿರುವ ಬಗ್ಗೆ ತಿಂಗಳ ಹಿಂದೆಯೇ ದೂರು ನೀಡಿದ್ದರೂ, ಸಿಬಿಐ ಈಗಷ್ಟೇ ದೂರು ದಾಖಲಿಸಿ ತನಿಖೆಗೆ ಇಳಿದಿರುವುದು ಅದರ ತನಿಖಾ ವ್ಯವಸ್ಥೆಯಲ್ಲಿನ ಸಡಿಲುತನವನ್ನು ಬೆಳಕಿಗೆ ತಂದಿತು. ಒರಿಯೆಂಟಲ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಸಭ್ಯ ಸೇಠ್ , ರೀಟಾ ಸೇಠ್ , ಕೃಷ್ಣ ಕುಮಾರ್ ಸಿಂಗ್ , ರವಿ ಸಿಂಗ್ ಮತ್ತು ದ್ವಾರಕಾ ದಾಸ್ ಸೇಠ್, ಎಸ್ಇಝಡ್ ಇನ್ಕಾರ್ಪೊರೇಶನ್ ಸಂಸ್ಥೆಯ ವಿರುದ್ಧ ಸಿಬಿಐ ಈದಿನ ಪ್ರಕರಣ ದಾಖಲಿಸಿಕೊಂಡಿತು.  ದ್ವಾರಕಾದಾಸ್ ಸೇಠ್  ಕಂಪೆನಿಯು ೨೦೦೭ ಮತ್ತು ೨೦೧೨ರ ನಡುವೆ ಓಬಿಸಿ ಯಿಂದ ವಿವಿಧ ಬಗೆಯಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಂಡಿದ್ದು ಸುಸ್ತಿ ಸಾಲವು ೩೮೯ ಕೋಟಿ ರೂ. ಮೊತ್ತಕ್ಕೆ ಬೆಳೆದಿದೆ ಎಂದು ಮೂಲಗಳು ಹೇಳಿವೆ. ನೀರವ್ ಮೋದಿ, ಮತ್ತು ಮೆಹುಲ್ ಚೋಕ್ಸಿ ಅವರು ಬ್ಯಾಂಕಿಗೆ ವಂಚಿಸಿದ ಮಾದರಿಯಲ್ಲೇ ಸಾಲ ಪತ್ರಗಳನ್ನು  (ಲೆಟರ್ಸ್ ಆಫ್ ಕ್ರೆಡಿಟ್) ಬಳಸಿಕೊಂಡು ವಜ್ರಾಭರಣ ಸಂಸ್ಥೆ ದ್ವಾರಕಾ ದಾಸ್ ಸೇಠ್ ಇಂಟರ್ ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತನ್ನನ್ನು ವಂಚಿಸಿದೆ ಎಂದು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ತನ್ನ ದೂರಿನಲ್ಲಿ ತಿಳಿಸಿತ್ತು. ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿದ್ದರೆ ಹಣ ಪಾವತಿ ಮಾಡಲು ಬ್ಯಾಂಕ್ ನೀಡುವ ಪತ್ರವೇ (ಲೆಟರ್ ಆಫ್ ಕ್ರೆಡಿಟ್) ಸಾಲಪತ್ರವಾಗಿದ್ದು, ಅದನ್ನೇ  ಪ್ರಕರಣದಲ್ಲಿ ವಂಚಿಸಲು ಬಳಸಲಾಗಿತ್ತು. ದ್ವಾರಕಾ ದಾಸ್ ಸೇಠ್ ಇಂಟರ್ ನ್ಯಾಷನಲ್ ಸಂಸ್ಥೆಯು ಒಬಿಸಿ ಬ್ಯಾಂಕಿನಿಂದ ಸಾಲಪತ್ರಗಳನ್ನು ಬಳಸಿ, ೨೦೦೭ರಿಂದ ಸಾಲಗಳನ್ನು ಪಡೆಯುತ್ತಾ ಬಂದಿತ್ತು.  ಬಿಲ್ ಗಳಲ್ಲಿ ಡಿಸ್ಕೌಂಟ್ ಮಾಡಿಕೊಳ್ಳಲು ಸಾಲಗಾರರು ಸವಲತ್ತನ್ನು ಬಳಸಿಕೊಂಡು ದುಬೈ ಬ್ಯಾಂಕ್ ಕೀನ್ಯ, ಸೊಲೆಯಿಲ್ ಚಾರ್ಟರ್ಡ್ ಬ್ಯಾಂಕ್, ಟ್ರೇಡ್ ಚಾರ್ಟರ್ಡ್ ಬ್ಯಾಂಕ್, ಟಿಎಫ್ ಕೊಂಟ್ರಾಕ್ಟ್ ಇಂಕ್, ಸೆಂಚುರಿ ಬ್ಯಾಂಕ್ ಕಾರ್ಪೋರೇಷನ್ ಎಲ್ ಸಿಸಿ ಇತ್ಯಾದಿ ಬ್ಯಾಂಕುಗಳ ಮೂಲಕ ಹಣ ಪಡೆದುಕೊಳ್ಳುತ್ತಿದ್ದರು ಎಂದು ಸಿಬಿಐಗೆ ನೀಡಿದ ತನ್ನ ದೂರಿನಲ್ಲಿ ಒಬಿಸಿ ತಿಳಿಸಿತ್ತು.  ಸಾಲಪತ್ರಗಳನ್ನು ಬಳಸಿ ಹಣ ಪಡೆಯುವ ಪದ್ಧತಿಯು, ಇತರ ಬ್ಯಾಂಕುಗಳು ದುರ್ಬಲ ಶ್ರೇಯಾಂಕದ ಬ್ಯಾಂಕುಗಳಾಗಿರುವುದನ್ನು  ಒಬಿಸಿಯು ಗಮನಿಸುವವರೆಗೂ ಮುಂದುವರೆದಿತ್ತು. ಬಳಿಕ ಓರಿಯಂಟಲ್ ಬ್ಯಾಂಕ್ ಸಾಲ ಸವಲತ್ತನ್ನು ಸ್ಥಗಿತಗೊಳಿಸಿತು. ಸಾಲಗಾರ ಸಂಸ್ಥೆಯು ಬಳಿಕ ಸಕಾಲದಲ್ಲಿ ಸಾಲದ ಹಣ ಮರುಪಾವತಿ ಮಾಡಲಿಲ್ಲ. ಬದಲಿಗೆ ದುರ್ಬಲ ವಹಿವಾಟಿನ ನೆಪ ನೀಡಿ ಮರುಪಾವತಿಗೆ ಕಾಲಾವಕಾಶ ಕೋರುತ್ತಾ ಬಂದಿತು. ’ಈಗ ಕಳೆದ ೧೦ ತಿಂಗಳುಗಳಲ್ಲಿ ಗ್ರಾಹಕನು ಪ್ರತಿಕ್ರಿಯಿಸುತ್ತಲೇ ಇಲ್ಲ. ಬ್ಯಾಂಕಿನಲ್ಲಿ ಇರುವ ದಾಖಲೆಯಲ್ಲಿನ ವಿಳಾಸಗಳಲ್ಲಿ ವಿಚಾರಿಸಿದರೆ ಸಾಲಗಾರನಾಗಲೀ, ಕುಟುಂಬ ಸದಸ್ಯರಾಗಲೀ ಲಭಿಸುತ್ತಿಲ್ಲ ಎಂದು ಗುರುಗ್ರಾಮದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಬಾಂಕ್ ಸಿಬಿಐಗೆ ತಿಳಿಸಿತು. ಫಾರೆನ್ಸಿಕ್ ಅಡಿಟ್ ನಡೆಸಿದಾಗ, ಸಾಲಪತ್ರ ನೀಡಿದ ಕೆಲವು ವಿದೇಶೀ ಬ್ಯಾಂಕುಗಳು ಋಣಾತ್ಮಕ ರೇಟಿಂಗ್ಸ್ ಹೊಂದಿದ್ದುದು, ಕೆಲವು ಬ್ಯಾಂಕುಗಳು ಅಸ್ತಿತ್ವದಲ್ಲೇ ಇಲ್ಲದಿದ್ದುದು ಬೆಳಕಿಗೆ ಬಂತು ಎಂದು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹೇಳಿತು. ಒಬಿಸಿ ನೇಮಿಸಿದ್ದ ಗ್ರಾಂಟ್ ಥ್ರೊಂಟೊನ್ ಇಂಡಿಯಾ ನಡೆಸಿದ ಫಾರೆನ್ಸಿಕ್ ಅಡಿಟ್ ನಲ್ಲಿ ಸಾಲಗಾರನ ಇನ್ ವಾಯ್ಸಿನಲ್ಲಿ ನಮೂದಿಸಲಾಗಿದ್ದ ಬ್ಯಾಂಕಿನ ವಿಳಾಸದಲ್ಲಿ ಬ್ಯಾಂಕೇ ಇಲ್ಲದಿದ್ದುದೂ ಬೆಳಕಿಗೆ ಬಂತು. ಚಿನ್ನ, ಅಮೂಲ್ಯ ರತ್ನಗಳನ್ನು ಖರೀದಿಸಲು ಸಾಲಗಾರರಿಗೆ ಅನುಕೂಲ ಮಾಡಿಕೊಡಲು ಸಾಲಪತ್ರಗಳನ್ನು ನೀಡಲಾಗುತ್ತದೆ. ಆದರೆ ಇವುಗಳನ್ನು ಖೊಟ್ಟಿ ವಾಣಿಜ್ಯ ವ್ಯವಹಾರಗಳಲ್ಲಿ ಬಳಸಲಾಗಿರುವುದು ಕಂಡು ಬಂದಿದೆ ಎಂದು ಫಾರೆನ್ಸಿಕ್ ಅಡಿಟರ್ ಗಳು ನಮೂದಿಸಿರುವುದನ್ನು ಬ್ಯಾಂಕ್ ಸಿಬಿಐ ಗಮನಕ್ಕೆ ತಂದಿತು. ಸಾಲಗಾರರು, ಗ್ರಾಹಕರು ಮತ್ತು ಕಂಪೆನಿಯ ವಾರ್ಷಿಕ ವಹಿವಾಟು ಸೇರಿದಂತೆ ಹಲವಾರು ಮಾಹಿತಿ ಸಂಬಂಧಿತ ವಾಸ್ತವಾಂಶಗಳನ್ನು ದ್ವಾರಕಾ ದಾಸ್ ಸೇಠ್ ಇಂಟರ್ ನ್ಯಾಷನಲ್ ತಿರುಚಿದೆ. ತನ್ನ ವಾರ್ಷಿಕ ವಹಿವಾಟು ೧೦೦ ಕೋಟಿ ರೂಪಾಯಿ ಎಂದು ಸಂಸ್ಥೆ ಪ್ರತಿಪಾದಿಸಿದೆ, ಆದರೆ ಅದರ ವಾರ್ಷಿಕ ವಹಿವಾಟು ಇದ್ದುದು ೧೪ ಕೋಟಿಯಿಂದ ೧೫ ಕೋಟಿ ರೂಪಾಯಿ ಮಾತ್ರ ಎಂದು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಸಿಬಿಐಗೆ ನೀಡಿದ ದೂರಿನಲ್ಲಿ ವಿವರಿಸಿತ್ತು.

2018: ಮೊಗಡಿಶು: ಸೋಮಾಲಿಯಾ ರಾಜಧಾನಿ ಮೊಗಡಿಶುವಿನಲ್ಲಿ ಸಂಭವಿಸಿದ ಕಾರುಬಾಂಬ್ ಸ್ಫೋಟದಲ್ಲಿ ೩೮ ಜನರು ಸಾವನ್ನಪ್ಪಿದರು ಎಂದು ನಗರದ ಆಂಬುಲೆನ್ಸ್ ಸೇವೆಯು ತಿಳಿಸಿತು.  ‘ಕನಿಷ್ಠ ೩೮ ಮಂದಿ ಸಾವನ್ನಪ್ಪಿದ್ದನ್ನು ನಾವು ಕಂಡಿದ್ದೇವೆ ಎಂದು ಅಮಿನ್ ಅಂಬುಲೆನ್ಸಿನ ಅಬ್ದುಕಾದಿರ್ ಅಬ್ದುರಹಮಾನ ಅಡೆನ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಅಧ್ಯಕ್ಷೀಯ ಅರಮನೆ ಮತ್ತು ಹೋಟೆಲ್ ಒಂದನ್ನು ಗುರಿಯಾಗಿಟ್ಟು ಕಾರುಬಾಂಬ್ ದಾಳಿ ನಡೆದಿತ್ತು. ಸರ್ಕಾರಿ ಕಚೇರಿ ವಿಲ್ಲಾ ಸೋಮಾಲಿಯಾಕ್ಕೆ ಸಮೀಪದ ಚೆಕ್ ಪಾಯಿಂಟ್ ಸೆಕ್ಯುರಿಟಿಯ ಸಮೀಪ ಗುಂಡುಹಾರಾಟದ ಸದ್ದಿನೊಂದಿಗೆ ಮೊದಲ ಸ್ಫೋಟ ಸಂಭವಿಸಿತು. ಸ್ವಲ್ಪ ಹೊತ್ತಿನಲ್ಲೇ ಎರಡನೇ ಸ್ಫೋಟ ಹೊಟೇಲ್ ಒಂದರ ಸಮೀಪ ಸಂಭವಿಸಿತು ಎಂದು ಪೊಲೀಸರು ಹೇಳಿದರು.  ಶಬಾಬ್ ಇಸ್ಲಾಮಿ ಉಗ್ರಗಾಮಿ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಅಂತರ್ಜಾಲದಲ್ಲಿ ಹೇಳಿಕೆ ನೀಡಿ ಸರ್ಕಾರ ಮತ್ತು ಭದ್ರತಾ ಸೇವೆಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿದೆ ಎಂದು ಪ್ರತಿಪಾದಿಸಿತು.  ಕೆಲವು ವಾರಗಳ ಶಾಂತ ವಾತಾವರಣದ ಬಳಿಕ ಮೊಗಡಿಶುವಿನಲ್ಲಿ ಸ್ಫೋಟ ಸಂಭವಿಸಿತು.  ಅಧ್ಯಕ್ಷರ ಅರಮನೆಯತ್ತ ತೆರಳುವ ರಸ್ತೆಯಲ್ಲಿ ಚೆಕ್ ಪಾಯಿಂಟ್ ಉಲ್ಲಂಘಿಸಿ ಮುನ್ನುಗ್ಗಲು ಯತ್ನಿಸುವ ಹೊತ್ತಿನಲ್ಲಿ ಮುಖ್ಯ ಸ್ಫೋಟ ಸಂಭವಿಸಿತು.  ಆದರೆ ಭದ್ರತಾ ಸಿಬ್ಬಂದಿ ಅವರನ್ನು ಮುನ್ನುಗ್ಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ಭಯೋತ್ಪಾದಕರ ಉದ್ದೇಶ ಸಾಧನೆಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿದವು. ಬಹುಮುಖ್ಯವಾದ ಗುರಿಗಳನ್ನು ಅವರು ಇಟ್ಟುಕೊಂಡಿದ್ದರು. ಆದರೆ ಗುರಿಗಳ ಸನಿಹಕ್ಕೂ ಅವರಿಗೆ ಬರಲಾಗಲಿಲ್ಲ. ಐವರು ಭಯೋತ್ಪಾದಕರಿದ್ದು ಅವರನ್ನು ಭದ್ರತಾ ಪಡೆಗಳು ಗುಂಡಿಟ್ಟು ಕೊಂದಿವೆ ಎಂದು ಭದ್ರತಾ ಅಧಿಕಾರಿ ಅಬ್ದುಲ್ಲಾಹಿ ಅಹ್ಮದ್ ನುಡಿದರು. ಶಬಾಬ್ ಇಸ್ಲಾಮೀ ಭಯೋತ್ಪಾದಕ ಸಂಘಟನೆಯು ಸೋಮಾಲಿಯಾದ ಅಂತಾರಾಷ್ಟ್ರೀಯ ಬೆಂಬಲಿತ ಸರ್ಕಾರವನ್ನು ಕಿತ್ತೊಗೆಯಲು ಹೋರಾಟ ನಡೆಸುತ್ತಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಅದು ಅತ್ಯಂತ ಭೀಕರ ಬಾಂಬ್ ದಾಳಿ ನಡೆಸಿ  ೫೦೦ ಜನರನ್ನು ಬಲಿ ಪಡೆದಿತ್ತು. ಈ ದಾಳಿಯನ್ನು ಅನುಸರಿಸಿ ಸೋಮಾಲಿಯಾ ಸರ್ಕಾರವು ಭಯೋತ್ಪಾದಕ ಸಂಘಟನೆಯ ವಿರುದ್ಧ ಅಮೆರಿಕದ ಡ್ರೋನ್ ಗಳನ್ನು ಬಳಸಿ ತೀವ್ರ ದಾಳಿ ಕಾರ್ಯಾಚರಣೆ ನಡೆಸಿತ್ತು. ೨೦೧೧ ರಲ್ಲಿ ಭಯೋತ್ಪಾದಕ ಸಂಘಟನೆಯನ್ನು ರಾಜಧಾನಿಯಿಂದ ಹೊರತಳ್ಳುವಲ್ಲಿ ಸರ್ಕಾರ ಯಶಸ್ವಿಯಾಗಿದ್ದರೂ, ಅದು ಗ್ರಾಮೀಣ ಪ್ರದೇಶದ ಹಲವೆಡೆಗಳಲ್ಲಿ ನಿಯಂತ್ರಣ ಹೊಂದಿದ್ದು ಸರ್ಕಾರ, ಸೇನೆ ಮತ್ತು ನಾಗರಿಕ ವಸತಿ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಆಗಾದ ದಾಳಿಗಳನ್ನು ನಡೆಸುತ್ತಿತ್ತು.

2018: ದಾಮನ್:  ದಾಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ಅಭಿವೃದ್ಧಿಗಾಗಿ ,೦೦೦ ರೂಪಾಯಿ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಇಲ್ಲಿ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ ಮತ್ತು ದಿಯು ಕರಾವಳಿ ಪಟ್ಟಣವನ್ನು ಸಂಪರ್ಕಿಸುವ ವಿಮಾನ ಹಾರಾಟಕ್ಕೂ ಚಾಲನೆ ನೀಡಿದರು. ಅಹಮದಾಬಾದ್ ನಗರವನ್ನು ದಿಯು ಜೊತೆಗೆ ಸಂಪರ್ಕಿಸುವ ಏರ್ ಒಡಿಶಾ ವಿಮಾನ ಹಾರಾಟವನ್ನು ಕೇಂದ್ರದ ಪ್ರಾದೇಶಿಕ ಸಂಪರ್ಕ ಯೋಜನೆಉಡಾನ್ ಅಡಿಯಲ್ಲಿ ಪ್ರಧಾನಿ ಉದ್ಘಾಟಿಸಿದರು. ವಿಮಾನ ಸಂಪರ್ಕವು ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಗಣನೀಯವಾಗಿ ಸುಧಾರಿಸಲಿದೆ ಎಂದು ಹಾರೈಸಲಾಯಿತು.  ಪ್ರಧಾನಿಯವರು ಇದೇ ಸಂದರ್ಭದಲ್ಲಿ ದಾಮನ್ ಮತ್ತು ದಿಯುವನ್ನು ಸಂಪರ್ಕಿಸುವ ಹೆಲಿಕಾಪ್ಟರ್ ಸೇವೆಗೂ ಚಾಲನೆ ನೀಡಿದರು. ‘ವಿಮಾನಯಾನದ ಮೂಲಕ ಲಭಿಸುವ ಸಂಪರ್ಕವು ಸೋಮನಾಥ ದೇವಾಲಯ, ಗುಜರಾತಿನ ಗಿರ್ ಅರಣ್ಯಗಳಿಗೆ ಭೇಟಿ ನೀಡಬಯಸುವ ಪ್ರವಾಸಿಗಳಿಗೆ ಅನುಕೂಲ ಕಲ್ಪಿಸಲಿದೆ. ಈಗ ಇಲ್ಲಿನ (ದಿಯು) ಜನರು ಗುಜರಾತಿಗೆ ಸುಲಭವಾಗಿ ಪಯಣಿಸಬಹುದು ಎಂದು ಮೋದಿ ನುಡಿದರು. ಸೋಮನಾಥ ದೇವಾಲಯ ಮತ್ತು ಗಿರ್ ಅರಣ್ಯ ದಿಯುವಿನಿಂದ ೮೦ ಕಿಮೀ ದೂರದಲ್ಲಿದೆ.  ಹಮದಾಬಾದ್ ಮತ್ತು ದಿಯು ನಡುವಣ ರಸ್ತೆ ಪಯಣಕ್ಕೆ ೧೨ ಗಂಟೆ ಬೇಕಾಗುತ್ತದೆ. ವಾಯುಮಾರ್ಗದಲ್ಲಿ ಕೇವಲ ಒಂದು ಗಂಟೆಯಲ್ಲಿ ಅಹಮದಾಬಾದ್ ಮತ್ತು ದಿಯು ಸಂಪರ್ಕವನ್ನು ಸಾಧಿಸಬಹುದು. ಜಲ ಸಂಸ್ಕರಣಾ ಘಟಕ, ಅನಿಲ ಕೊಳವೆ ಮಾರ್ಗ, ಎಲೆಕ್ಟ್ರಿಕ್ ಸಬ್ ಸ್ಟೇಷನ್, ಮುನಿಸಿಪಲ್ ಮಾರುಕಟ್ಟೆ ಮತ್ತು ಪಾದಯಾತ್ರಿ ಸೇತುವೆಗಳು ಸೇರಿದಂತೆ ವಿವಿಧ ಯೋಜನೆಗಳಿಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಮೋದಿ ಶಿಲಾನ್ಯಾಸ ನೆರವೇರಿಸಿದರು. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ ಆರ್) ಉಪಕ್ರಮಗಳ ಅಡಿಯಲ್ಲಿ ನಿರ್ಮಿಸಲಾದ ಅಂಗನವಾಡಿಗಳು ಶಾಲೆಗಳ ಉದ್ಘಾಟನೆಯನ್ನೂ ಪ್ರಧಾನಿ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅವರು ವಿವಿಧ ದಿವ್ಯಾಂಗರಿಗೆ ಸ್ಕೂಟರ್ ಗಳನ್ನು ಮತ್ತು ಮಹಿಳೆಯರಿಗೆ -ಆಟೋರಿಕ್ಷಾಗಳನ್ನೂ ವಿತರಿಸಿದರು.  ತಮ್ಮ ಸರ್ಕಾರವು ದಾಮನ್ ಮತ್ತು ದಿಯು ಅಭಿವೃದ್ಧಿಗಾಗಿ ಈದಿನ ,೦೦೦ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದೆ ಎಂದು ಪ್ರಧಾನಿ ಹೇಳಿದರು. ಇದಕ್ಕೆ ಮುನ್ನ ಮೋದಿಯವರು ಸೂರತ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅವರಿಗೆ ಅಲ್ಲಿ ಸಂಭ್ರಮದ ಸ್ವಾಗತ ನೀಡಲಾಯಿತು. ದಾಮನ್ ನಲ್ಲಿ ರಸ್ತೆಯ ಇಕ್ಕೆಲಗಳಲ್ಲೂ ಭಾರಿ ಸಂಖ್ಯೆಯಲ್ಲಿ ಸೇರಿದ ಜನ ಪ್ರಧಾನಿಯನ್ನು ಹರ್ಷೋದ್ಘಾರಗಳೊಂದಿಗೆ ಸ್ವಾಗತಿಸಿದರು.

2018: ನವದೆಹಲಿ: ಅನ್ಯ ಗ್ರಹ ಜೀವಿಗಳಿಗೆ ಸಂಬಂಧಿಸಿದಹಾರುವ ತಟ್ಟೆಗಳು (ಯುಎಫ್) ಜಗತ್ತಿನ ವಿವಿಧೆಡೆಗಳಲ್ಲಿ  ಪತ್ತೆಯಾದದ್ದು ಹಳೆ ವಿಚಾರ. ಆದರೆ ಇದೀಗ ಎವರೆಸ್ಟ್ ಪರ್ವತ ಶಿಖರ ಮತ್ತು ನಾರ್ವೆಯಲ್ಲಿಬಿಲ್ಲೆ (ಡಿಸ್ಕ್) ಆಕಾರದಹಾರುವ ತಟ್ಟೆ (ಯುಎಫ್) ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿದವು. ಪರ್ವತಾರೋಹಿಗಳು ಮತ್ತು ಹಾಲಿವುಡ್ ಚಿತ್ರ ನಿರ್ಮಾಪಕ ಡೇವಿಡ್ ಬ್ರಿಶಿಯರ್ಸ್ ಅವರ ಅತ್ಯದ್ಭುತವಾದ ಎರಡು ಬಿಲಿಯ ಪಿಕ್ಸೆಲ್ ಫೋಟೋಗ್ರಫಿಯಲ್ಲಿ ಸೆರೆ ಹಿಡಿದಿರುವ ೪೭೭ಹಾರುವ ತಟ್ಟೆಗಳ ಪೈಕಿ ಎವರೆಸ್ಟ್ ಪರ್ವತ ಶಿಖರದ ಮೇಲೆ ಹಾರಿದ ಬಿಲ್ಲೆಯಾಕಾರದಹಾರುವ ತಟ್ಟೆಯೂ ಒಂದು ಎಂದು "ಮಿರರ್ ವರದಿ ತಿಳಿಸಿತು.  ಹಾರುವ ತಟ್ಟೆಗಳ ವೈಭವವನ್ನು ತೋರಿಸುವ ಉದ್ದೇಶದಿಂದ ೨೦೧೨ರಲ್ಲಿ ಮೊಸಾಯಿಕ್ ಇಮೇಜ್ ಸೃಷ್ಟಿಸಲಾಗಿದ್ದರೂ, ನೈಜ ಯುಎಫ್ಓಗಳ ಗುರುತು, ಸ್ವರೂಪ, ಗಾತ್ರ, ವೈಖರಿ ಮಾತ್ರ ಇಂದಿಗೂ ನಿಗೂಢವಾಗಿಯೇ ಉಳಿದಿದೆ.  ಯುಎಫ್ ಅನ್ವೇಷಕರು ಎವರೆಸ್ಟ್ ಶಿಖರದ ಆಗಸದೆತ್ತರದಲ್ಲಿ ಕಂಡುಬಂದ ಯುಎಫ್, ಸಾಧಾರಣ ಎತ್ತರದಲ್ಲಿ ಹಾರುವ ಡ್ರೋನ್ ಅಥವಾ ಹೆಲಿಕಾಪ್ಟರ್ ಇರಲಾರದು ಎಂದು ಅಭಿಪ್ರಾಯ ಪಟ್ಟರು.  ಭಾರತ - ಚೀನಾ ನಡುವಣ ಲಡ್ಡಾಕ್ ಗಡಿಯಲ್ಲಿ, ಅತ್ಯಂತ ದುರ್ಗಮವಾದ "ಏರಿಯಾ ೫೧ ಎಂದು ಗುರುತಿಸಲ್ಪಟ್ಟಿರುವ ಪ್ರದೇಶದಲ್ಲಿನ ರಹಸ್ಯ ಭೂಗತ ನೆಲೆಗಳಲ್ಲಿ ಯುಎಫ್ ಇರಬಹುದೆಂಬ ಶಂಕೆಯನ್ನು ಬಹಳ ಹಿಂದೆಯೇ "ಯುಎಫ್ ಟುಡೇ ಲೇಖನ ವ್ಯಕ್ತ ಪಡಿಸಿತ್ತು.  ೨೦೧೭ರಲ್ಲಿ ಅಮೆರಿಕದ ಸಿಐಎ ಬಹಿರಂಗಪಡಿಸಿದ್ದ  ರಹಸ್ಯ ವರ್ಗೀಕೃತ ದಾಖಲೆಗಳಲ್ಲಿ  ೧೯೬೮ರಲ್ಲಿ ನೇಪಾಳ ಮತ್ತು ಭೂತಾನ್ನಲ್ಲಿ  ಏಳು ಯುಎಫ್ಓಗಳನ್ನು  ಗುರುತಿಸಿದ ಬಗ್ಗೆ ಉಲ್ಲೇಖೀಸಲಾಗಿತ್ತು. 

2018: ವಾಷಿಂಗ್ಟನ್: ಚಾರಿತ್ರಿಕ ಪ್ಯಾರಿಸ್ ಒಪ್ಪಂದದಿಂದ ಹೊರಬಂದ ತಮ್ಮ ನಿರ್ಧಾರಕ್ಕೆ ಭಾರತ ಮತ್ತು ಚೀನಾವನ್ನು ಮತ್ತೆ ಇಲ್ಲಿ ದೂಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರುಒಪ್ಪಂದ ಅನ್ಯಾಯದ್ದು. ಅದು ಒಪ್ಪಂದದಿಂದ ಅತ್ಯಂತ ಹೆಚ್ಚು ಲಾಭ ಗಳಿಸಿದ ಇತರ ದೇಶಗಳಿಗೆ ಅಮೆರಿಕ ಹಣ ಪಾವತಿ ಮಾಡುವಂತೆ ಮಾಡಿತ್ತುಎಂದು ಟೀಕಿಸಿದರು. ಪ್ಯಾರಿಸ್ ಒಪ್ಪಂದದಿಂದ ಹೊರಬರುವುದಾಗಿ ಟಂಪ್ ಅವರು ಕಳೆದ ವರ್ಷ ಪ್ರಕಟಿಸಿದ್ದರು. ಒಪ್ಪಂದದ ಪರಿಣಾಮವಾಗಿ ಅಮೆರಿಕಕ್ಕೆ ಸಹಸ್ರಗಟ್ಟಲೆ ಡಾಲರು ಗಳ ನಷ್ಟ ಉಂಟಾಗುತ್ತಿತ್ತು. ಅಮೆರಿಕನ್ನರ ನೌಕರಿಗಳನ್ನು ಅದು ಕೊಲ್ಲುತ್ತಿತ್ತು ಮತ್ತು ತೈಲ, ಅನಿಲ, ಕಲ್ಲಿದ್ದಲು ಉತ್ಪಾದನಾ ಕೈಗಾರಿಕೆಗಳನ್ನು ಕುಂಠಿತಗೊಳಿಸುತ್ತಿತ್ತು ಎಂದು ಅವರು ಹೇಳಿದ್ದರು. ಒಪ್ಪಂದದ ಬಗ್ಗೆ ಮರುಮಾತುಕತೆಗೆ ತಾನು ಮುಕ್ತನಾಗಿರುವುದಾಗಿಯೂ ಸಮಯದಲ್ಲಿ ಹೇಳಿದ್ದ ಟ್ರಂಪ್, ಸುಮಾರು ೨೦೦ ರಾಷ್ಟ್ರಗಳು ಪ್ರಸ್ತಾವವನ್ನು ಒಪ್ಪಿದ್ದವು ಎಂದಿದ್ದರು. ‘ನಾವು ಪ್ಯಾರಿಸ್ ಒಪ್ಪಂದಿಂದ ಹೊರಬಂದೆವು. ಅದು ಭಯಂಕರ ಪ್ರಮಾದವಾಗುತ್ತಿತ್ತು. ನಮ್ಮ ರಾಷ್ಟ್ರದ ಮೇಲೆ ಬೀಸುವ ದೊಡ್ಡ ವಿಪತ್ತು ಆಗುತ್ತಿತ್ತು ಎಂದು ಕನ್ಸರ್ ವೇಟಿವ್ ಪೊಲಿಟಿಕಲ್ ಆಕ್ಷನ್ ಕಮಿಟಿಯನ್ನು ಉದ್ದೇಶಿಸಿ ಮಾತನಾಡುತ್ತಾ ಟ್ರಂಪ್ ನುಡಿದರು. ಪ್ಯಾರಿಸ್ ಒಪ್ಪಂದದಿಂದ ಚೀನಾ ಮತ್ತು ಭಾರತದಂತಹ ರಾಷ್ಟ್ರಗಳು ಅಪಾರ ಲಾಭ ಗಳಿಸುತ್ತಿದ್ದವು. ಹವಾಮಾನಕ್ಕೆ ಸಂಬಂಧಿಸಿದ ಒಪ್ಪಂದ ಅಮೆರಿಕದ ಪಾಲಿಗೆ ಅನ್ಯಾಯದ್ದಾಗಿತ್ತು. ಅದು ನಮ್ಮ ವಹಿವಾಟು ಮತ್ತು ನೌಕರಿಗಳಿಗೆ ಧಕ್ಕೆ ಉಂಟು ಮಾಡುತ್ತಿತ್ತು ಎಂದು ಅವರು ಹೇಳಿದರು. ತಮ್ಮ ನಿರ್ಧಾರವನ್ನು ಸಮರ್ಥಿಸಿದ ಟ್ರಂಪ್, ’ನಿಮ್ಮಲ್ಲಿ ಬೇಕಾದಷ್ಟು ತೈಲ ಇದೆ, ಅನಿಲ ಇದೆ, ತಂತ್ರಜ್ಞಾನ ಇದೆ, ಇದೆಲ್ಲಕ್ಕೂ ಹೆಚ್ಚಾಗಿ ಕಲ್ಲಿದ್ದಲಿನ ಭಾರಿ ನಿಕ್ಷೇಪ ಇದೆ. ಆದರೆ ಇದನ್ನು ನೀವು ಬಳಸುವಂತಿಲ್ಲ ಎಂದು ಒಪ್ಪಂದ ಹೇಳುತ್ತಿತ್ತು. ಅಂದರೆ ನಾವು ವಿಶ್ವದ ಇತರ ರಾಷ್ಟ್ರಗಳ ಜೊತೆ ಸ್ಪರ್ಧಿಸುವಂತಿಲ್ಲ. ಇದು ಸಾಧ್ಯವಿಲ್ಲ ಎಂದು ನಾನು ಹೇಳಿದೆ ಎಂದು ಟ್ರಂಪ್  ಹೇಳಿದರು. ‘ಚೀನಾ ಮತ್ತು ಭಾರತ ದೊಡ್ಡ ರಾಷ್ಟ್ರಗಳು. ಅವು ತಮ್ಮನ್ನು ತಾವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಂದು ಹೇಳಿಕೊಳ್ಳುತ್ತವೆ. ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಂತೆ. ಹೀಗಾಗಿ ನಾವು ಅವರಿಗೆ ಹಣ ಕೊಡಬೇಕಂತೆ. ಹಾಗಾದರೆ ನಾವು ಏನು? ನಮ್ಮನ್ನೂ ಬೆಳೆಯಲು ಬಿಡುತ್ತೀರೇನು ಎಂದು ನಾನು ಅವರನ್ನು ಕೇ:ಳಿದೆ. ಜನರು ಪ್ಯಾರಿಸ್ ಒಪ್ಪಂದವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಟ್ರಂಪ್ ನುಡಿದರು. ‘ಪ್ಯಾರಿಸ್ ಒಪ್ಪಂದ ಚೆನ್ನಾಗಿ ಇರುವಂತೆ ಕಾಣುತ್ತದೆ. ಸುಂದರ ಶೀರ್ಷಿಕೆಗಳನ್ನು ಅವರು ಅದಕ್ಕೆ ಕೊಡುತ್ತಾರೆ. ನಾವು ನಿರ್ಮಾಣಗಳನ್ನು ಮಾಡಬಾರದು, ಕೃಷಿ ಮಾಡಬಾರದು, ನಿಮ್ಮ ಭೂಮಿಯಲ್ಲಿ ಒಂದು ಕೊಚ್ಚೆ ಗುಂಡಿ ಇದ್ದರೆ ಅದನ್ನು ಅವರು ಪರಿಸರ ಸಂರಕ್ಷಣೆಯ ಉದ್ದೇಶಕ್ಕಾಗಿ ಸರೋವರ ಎನ್ನುತ್ತಾರೆ. ಇದನ್ನೆಲ್ಲ ನಾನು ಹುಚ್ಚು ಎನ್ನುತ್ತೇನೆ. ಇದೆಲ್ಲ ಹುಚ್ಚು. ಕಣ್ಮುಚ್ಚಿಕೊಂಡು ಇದಕ್ಕೆಲ್ಲ ಸಹಿ ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದರು.

2018: ಶಿಲಾಂಗ್‌ : ಈಸ್ಟ್ಗ್ಯಾರೋ ಹಿಲ್ಸ್ನಲ್ಲಿ ಭದ್ರತಾ ಪಡೆಗಳು ನಡೆಸಿದ ಘರ್ಷಣೆಯಲ್ಲಿ ಮೇಘಾಲಯದ ಮೋಸ್ಟ್ವಾಂಟೆಡ್ಭಯೋತ್ಪಾದಕ  ಹತನಾದ. ನಿಷೇಧಿತ ಗ್ಯಾರೋ ನ್ಯಾಶನಲ್ಲಿಬರೇಶನ್ಆರ್ಮಿಯ (ಜಿಎನ್ಎಲ್) ಸ್ವ ಘೋಷಿತ ಮುಖ್ಯಸ್ಥ  ಸೋಹನ್ಡಿ ಶಿರಾ ಎನ್ಕೌಂಟರ್ನಲ್ಲಿ ಹತನಾದ ಉಗ್ರ. ಆತನ ತಲೆಗೆ 10 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು.  ಇದೇ ಫೆ.18ರಂದು ನ್ಯಾಶನಲಿಸ್ಟ್ಕಾಂಗ್ರೆಸ್ಪಕ್ಷದ (ಎನ್ಸಿಪಿ) ಅಭ್ಯರ್ಥಿ ಜೋನಾಥನ್ಎನ್ಸಂಗ್ಮಾ ಅವರ ಐಇಡಿ ದಾಳಿಯಲ್ಲಿ ಮೃತರಾದುದನ್ನು ಅನುಸರಿಸಿ ಎನ್ಕೌಂಟರ್ನಡೆದಿತ್ತು. ಸಂಗ್ಮಾ ಅವರನ್ನು ಬಲಿ ಪಡೆಯಲು ಜಿಎನ್ಎಲ್ ಬಾಂಬ್ ಸ್ಫೋಟಿಸಿತ್ತು.  ಮೋಸ್ಟ್ವಾಂಟೆಡ್ಉಗ್ರ ಸೋಹನ್ಡಿ ಶಿರಾ ವಿರುದ್ಧ ಈದಿನ ಡೋಬು ಸಮೀಪದ ಅಛಾಪೆಕ್ಗ್ರಾಮದಲ್ಲಿ ಎನ್ಕೌಂಟರ್ನಡೆಸಲಾಗಿತ್ತು.

2018: ನವದೆಹಲಿ: ಪಂಜಾಬ್ನ್ಯಾಷನಲ್ಬ್ಯಾಂಕ್ವಂಚನೆ ಪ್ರಕರಣಕ್ಕೆ ಸಂಬಂಧಿಸಿ 11,300 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪಲಾಯನಗೈದಿರುವ ಚಿನ್ನಾಭರಣ ವ್ಯಾಪಾರಿ ನೀರವ್ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ಚೋಸ್ಕಿ ಅವರ ಪಾಸ್ಪೋರ್ಟ್ಗಳನ್ನು ವಿದೇಶಾಂಗ ಇಲಾಖೆ ಅಧಿಕೃತವಾಗಿ ರದ್ದು ಮಾಡಿತು.
ಜಾರಿ ನಿರ್ದೇಶನಾಲಯದ ಸಲಹೆ ಮೇರೆಗೆ ವಿದೇಶಾಂಗ ಇಲಾಖೆ ತಕ್ಷಣ ಜಾರಿಗೆ ಬರುವಂತೆ ಫೆಬ್ರವರಿ 16ರಂದು ನಾಲ್ಕು ವಾರಗಳ ಕಾಲ ಇಬ್ಬರ ಪಾಸ್ಪೋರ್ಟ್ಗಳನ್ನು ಅಮಾನತು ಮಾಡಿತ್ತು ಮತ್ತು ಪಾಸ್ಪೋರ್ಟ್ಅಮಾನತು ವಿಚಾರವಾಗಿ ಪ್ರತಿಕ್ರಿಯಿಸುವಂತೆ ಒಂದು ವಾರ ಗಡುವು ನೀಡಿತು. 'ಇದುವರೆಗೆ ನೀರವ್ಮತ್ತು ಮೆಹುಲ್ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಇಬ್ಬರ ಪಾಸ್ಪೋರ್ಟ್ಗಳನ್ನು ರದ್ದು ಮಾಡಲಾಗಿದೆ' ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿ ವಲಯದ ಮೂಲ ತಿಳಿಸಿತು. ತನಿಖಾ ದಳಕ್ಕೆ ನೆರವಾಗುವ ನಿಟ್ಟಿನಲ್ಲಿ ಇಬ್ಬರು ವಂಚಕರ ಮೇಲೆ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿದವು.

2017: ಕೊಯಮತ್ತೂರು: ಪ್ರಧಾನಿ ನರೇಂದ್ರ ಮೋದಿ  ಅವರು ಮಹಾಶಿವರಾತ್ರಿ ಪ್ರಯುಕ್ತ ಈದಿನ  ತಮಿಳುನಾಡಿನ ಕೊಯಮತ್ತೂರಿನ ಆದಿಯೋಗಿ ಶಿವನ ಬೃಹತ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು. ಪ್ರತಿಮೆಯು 112 ಅಡಿ ಎತ್ತರವಿದ್ದು, ವಿಶ್ವದಲ್ಲೇ ಅತ್ಯಂತ ಬೃಹತ್ ಶಿವನ ಮುಖದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಶನ್ ನೂತನ ಬೃಹತ ಶಿವನ ಪ್ರತಿಮೆಯನ್ನು ನಿರ್ಮಿಸಿದೆ. ಕೊಯಮತ್ತೂರಿನ ವೆಲ್ಲಿಯನ್ಗಿರಿ ಬೆಟ್ಟಸಾಲಿನ ತಪ್ಪಲಿನಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ನಿರ್ಮಾಣದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದರು. ಆರ್ಟ್ಆಫ್ಲಿವಿಂಗ್ ಶ್ರೀ ಶ್ರೀ ರವಿಶಂಕರ್ಅವರು ಕಳೆದ ವರ್ಷ ಯಮುನಾ ನದಿ ಪಾತ್ರದಲ್ಲಿ ಮೂರು ದಿನಗಳಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದರು.  ಕಾರ್ಯಕ್ರಮದಿಂದ ಯಮುನಾ ನದಿ ಪಾತ್ರದ ಜೀವವೈವಿಧ್ಯಕ್ಕೆ ಧಕ್ಕೆಯಾಗಿತ್ತು ಎಂದು ಪರಿಸರವಾದಿಗಳು ಆರೋಪಿಸಿದ್ದರು. ‘ಆದಿಯೋಗಿ ಪ್ರತಿಮೆ ನಿರ್ಮಾಣದಲ್ಲೂ ಜೀವವೈವಿಧ್ಯಕ್ಕ ಧಕ್ಕೆಯಾಗಿದೆ. ನಿಯಮ ಉಲ್ಲಂಘಿಸಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಪರಿಸರಕ್ಕೆ ಹಾನಿಯಾಗುವಂಥ ಕಾರ್ಯಕ್ಕೆ ಮುಂದಾಗಿರುವ ಈಶ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಬಾರದುಎಂದು ತಮಿಳುನಾಡಿನಪೂವುಳಗಿನ್ನನ್ಬರ್ಗಳ್‌’ ಸ್ವಯಂಸೇವಾ ಸಂಸ್ಥೆ ಮಂಗಳವಾರ ಒತ್ತಾಯಿಸಿತ್ತು..
2017: ತಿರುವನಂತಪುರಂ: ಕೇರಳದ ತ್ರಿಶ್ಶೂರ್ಜಿಲ್ಲೆಯಲ್ಲಿರುವ ಶೋಭಾ ಮಾಲ್ನಲ್ಲಿ ನಡೆದ
ಕಾರ್ಯಕ್ರಮವೊಂದಲ್ಲಿ ಯುವಕನೊಬ್ಬ ಒಂದು ನಿಮಿಷದಲ್ಲಿ ಬರಿಗೈಯಿಂದ 124 ತೆಂಗಿನಕಾಯಿಗಳನ್ನು ಒಡೆದು ವಿಶ್ವದಾಖಲೆ ಸೃಷ್ಟಿಸಿದ. ಕೇರಳ ರಸ್ತೆ ಸಾರಿಗೆ ಸಂಸ್ಥೆಯ ನೌಕರನಾಗಿರುವ ಪೂಂಜಾರ್ ನಿವಾಸಿ ಪಿ. ಡೊಮಿನಿಕ್ ಸಾಧನೆ ಮಾಡಿದ ಯುವಕ. ಈ ಹಿಂದೆ ಜರ್ಮನಿಯ ಮುಹಮ್ಮದ್ ಕಹರಿಮನೋವಿಕ್ ಎಂಬವರು ಒಂದು ನಿಮಿಷದಲ್ಲಿ 118 ತೆಂಗಿನಕಾಯಿಗಳನ್ನು ಒಡೆದು ದಾಖಲೆ ಸೃಷ್ಟಿಸಿದ್ದರು. ಇದೀಗ ಡೊಮಿನಿಕ್ ದಾಖಲೆಯನ್ನು ಮುರಿಯುವ ಮೂಲಕ ಗಿನ್ನಿಸ್  ದಾಖಲೆಯಲ್ಲಿ ಸ್ಥಾನಗಿಟ್ಟಿಸಿಕೊಂಡರು.
2017: ಬೆಂಗಳೂರು: ಹೊಸ ವೈಶಿಷ್ಟ್ಯತೆಗಳೊಂದಿಗೆ ವಾಟ್ಸ್ ಆ್ಯಪ್ ಅಪ್ಡೇಟ್ ಆಗಿದೆ. ಅಪ್ಡೇಟ್ ಆಗಿರುವ ವಾಟ್ಸ್ ಆ್ಯಪ್ನಲ್ಲಿ ಬಳಕೆದಾರರು ಸ್ಟೇಟಸ್ ಅಪ್ಡೇಟ್ ಮಾಡುವಾಗ ಪಠ್ಯ (text) ಮಾತ್ರವಲ್ಲದೆ ಫೋಟೊ ಮತ್ತು ವಿಡಿಯೊ ಅಪ್ಲೋಡ್ ಮಾಡಬಹುದಾಗಿದೆ. ಆ್ಯಂಡ್ರಾಯ್ಡ್, ಐಒಎಸ್ (iOS) ಮತ್ತು ವಿಂಡೋಸ್ ಸ್ಮಾರ್ಟ್ಫೋನ್ಗಳಲ್ಲಿ ವೈಶಿಷ್ಟ್ಯತೆ ಲಭ್ಯವಿದೆ ಎಂದು ವಾಟ್ಸ್ ಆ್ಯಪ್  ಪ್ರಕಟಿಸಿತು.  ಸ್ಟೇಟಸ್ ಅಪ್ಡೇಟ್  ಮಾಡುವುದು ಹೇಗೆ?
ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ಗಳಲ್ಲಿ ವಾಟ್ಸ್ ಆ್ಯಪ್ ತೆರೆದ ಕೂಡಲೇ chats ಪಕ್ಕದಲ್ಲೇ ಸ್ಟೇಟಸ್ ಎಂಬ ಆಯ್ಕೆ ಲಭ್ಯವಿದೆ. ಮೊದಲು Contacts ಎಂಬ ಆಯ್ಕೆ ಇತ್ತು. ಇದೀಗ Contacts ಜಾಗದಲ್ಲಿ Status ಆಯ್ಕೆ ಕಾಣಿಸುತ್ತದೆ.

2017: ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ಅವರು ತಿರುಪತಿ
ವೆಂಕಟರಮಣನಿಗೆ  ರೂ. 5ಕೋಟಿ ಮೌಲ್ಯದ 19 ಕೆ.ಜಿ ಚಿನ್ನಾಭರಣವನ್ನು ಹರಕೆ ಅರ್ಪಿಸಿದ ನಂತರ ಕುರವಿ ವೀರಭದ್ರಸ್ವಾಮಿ ದೇವರಿಗೆ  ಈದಿನ ಬಂಗಾರದ ಮೀಸೆಯನ್ನು ಹರಕೆಯಾಗಿ ಈದಿನ ಅರ್ಪಿಸಿದರು. ಬಂಗಾರದ ಮೀಸೆಯ ಬೆಲೆ  ರೂ.75,000. ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭದಲ್ಲಿ ತಿರುಪತಿಗೆ  ಹರಕೆ ಹೊತ್ತಿರುವುದಾಗಿ ಹೇಳಿದ್ದ ಕೆಸಿಆರ್  ಫೆಬ್ರುವರಿ 22 ರಂದು ತಿರುಪತಿ ವೆಂಕಟರಮಣನಿಗೆ ಚಿನ್ನಾಭರಣ ಅರ್ಪಿಸಿದ್ದರು. ಆಭರಣ ತಯಾರಿಸಲು ಚಂದ್ರಶೇಖರ್ರಾವ್ಅವರು ತಿರುಪತಿ ತಿರುಮಲ ದೇವಸ್ಥಾನಕ್ಕೆ ರೂ.5 ಕೋಟಿ ಹಣ ನೀಡಿದ್ದರು. ಗುತ್ತಿಗೆ ಆಧಾರದ ಮೂಲಕ ಕೊಯಮತ್ತೂರಿನ ಕೀರ್ತಿಲಾಲ್ಕಾಳಿದಾಸ್ಜುವೆಲರ್ಸ್‌  ಅವರು 22 ಕ್ಯಾರೆಟ್ಚಿನ್ನದ ಆಭರಣಗಳನ್ನು 15 ದಿನಗಳಲ್ಲಿ ತಯಾರಿಸಿದ್ದರು. ಇದರಲ್ಲಿ ತೆಲಂಗಾಣ ಪದ್ಧತಿಯಂತೆ 14.2 ಕೆ.ಜಿಯಸಾಲಿಗ್ರಾಮ ಹರಾಮ್‌’ ಹಾಗೂ  4.61 ಕೆ.ಜಿಯ ಐದು ಸರಗಳಿದ್ದವು. ಇಷ್ಟೊಂದು ದೊಡ್ಡ ಮೊತ್ತದಲ್ಲಿ ಹರಕೆ ಸಲ್ಲಿಸುತ್ತಿರುವುದಕ್ಕೆ ಟೀಕೆಗಳು ಕೇಳಿ ಬರುತ್ತಿದ್ದರೂ ತೆಲಂಗಾಣ ಮುಖ್ಯಮಂತ್ರಿ ಮಾತ್ರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಕುರವಿ ವೀರಭದ್ರಸ್ವಾಮಿ ದೇವಾಲಯಕ್ಕೆ ಚಿನ್ನದ ಮೀಸೆ ಸಲ್ಲಿಸಿದ ನಂತರ ವಾರಂಗಲ್ನಲ್ಲಿರುವ ಭದ್ರಕಾಳಿ ದೇವರಿಗೆ ಚಿನ್ನದ ಅಂಗಿ, ವಿಜಯವಾಡದಲ್ಲಿರುವ ಕನಕ ದುರ್ಗಾ ದೇವರಿಗೆ ಮತ್ತು ತಿರುಚನೂರಿನಲ್ಲಿರುವ ಪದ್ಮಾವತಿ ದೇವರಿಗೆ ಮೂಗುತಿ ಸಲ್ಲಿಸಲು ಕೆಸಿಆರ್ ತೀರ್ಮಾನಿಸಿದ್ದರು.
2017: ವಾಷಿಂಗ್ಟನ್: ಅಮೆರಿಕದ ಕನ್ಸಾಸ್ ನಗರದ ಬಾರ್‍‍ವೊಂದರಲ್ಲಿ ಭಾರತೀಯನ ಮೇಲೆ
ಅಮೆರಿಕದ ಪ್ರಜೆಯೊಬ್ಬರು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಘಟಿಸಿತು. ಹೈದರಾಬಾದ್ ಮೂಲದ  ಶ್ರೀನಿವಾಸ್ ಕುಚಿಭೋಟ್ಲಾ (32) ಮೃತ ದುರ್ದೈವಿ. ಗುಂಡಿನ ದಾಳಿಯಲ್ಲಿ ಇಬ್ಬರು ಎಂಜಿನಿಯರ್‍‍ಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ರಾತ್ರಿ ಬಾರ್ ಒಳಗೆ ನುಗ್ಗಿದ 51 ಹರೆಯದ ಆ್ಯಡಂ ಪುರಿಂಟನ್ ಎಂಬ ವ್ಯಕ್ತಿ ಗುಂಡಿನದಾಳಿ ನಡೆಸಿದ. ತೀವ್ರ ಗಾಯಗೊಂಡ ಶ್ರೀನಿವಾಸ್ ಕನ್ಸಾಸ್ ಸ್ಥಳೀಯ ಆಸ್ಪತ್ರೆಯಲ್ಲಿ ಅಸು ನೀಗಿದ್ದು, ದಾಳಿಯಲ್ಲಿ ಗಾಯಗೊಂಡ ಭಾರತೀಯ ಮೂಲದ ಅಲೋಕ್‌ ಮದಸನಿ (31) ಮತ್ತು ಇಯಾನ್ ಗ್ರಿಲ್ಲೋಟ್ (24) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ನನ್ನ ದೇಶದಿಂದ ಹೊರಗೆ ಹೋಗಿ: ಕನ್ಸಾಸ್ ಒಲಾಥೆ ಎಂಬಲ್ಲಿರುವ ಆಸ್ಟಿನ್ಸ್ ಬಾರ್ ಆ್ಯಂಡ್ ಗ್ರಿಲ್ ನಲ್ಲಿ ಘಟನೆ ಘಟಿಸಿತು.  'ನನ್ನ ದೇಶದಿಂದ ಹೊರಗೆ ಹೋಗಿ' ಎಂದು ಹೇಳಿ ಶ್ರೀನಿವಾಸ್ ಮೇಲೆ ಪುರಿಂಟನ್ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಬಾರ್ ನೌಕರರು ಹೇಳಿದರು.  ಜವಾಹರ್ಲಾಲ್ ನೆಹರು ಟೆಕ್ನಾಲಜಿಕಲ್ ಯುನಿವರ್ಸಿಟಿಯಿಂದ ಇಲೆಕ್ರ್ಟಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ಪದವೀಧರನಾಗಿದ್ದ ಶ್ರೀನಿವಾಸ್ ಯುಟಿಇಪಿಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು, ಆನಂತರ  ರಾಕ್ವೆಲ್ ಕೋಲಿಲ್ಸ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿಯನಿಯರ್ ಆಗಿದ್ದರು. ಜಿಪಿಎಸ್ ತಯಾರಿಕಾ ಸಂಸ್ಥೆಯಾದ ಗಾರ್ಮಿನ್ನಲ್ಲಿ ಏವಿಯೇಷನ್  ಸಿಸ್ಟಮ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು  ಟೆಕ್ಸಾಸ್ ಎಲ್ ಪಸೊ ಯುನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶ್ರೀನಿವಾಸ್ ಅವರ ಪತ್ನಿ ಸುನನ್ಯಾ ದುಮಾಲಾ ಅಮೆರಿಕದ ಟೆಕ್ನಾಲಜಿ ಕಂಪನಿಯೊಂದರ ಉದ್ಯೋಗಿ. ಸುಷ್ಮಾ ಸ್ವರಾಜ್ ಸಂತಾಪ: ಕನ್ಸಾಸ್  ನಲ್ಲಿ  ನಡೆದ ಗುಂಡಿನ ದಾಳಿಯಲ್ಲಿ ಸಾವಿಗೀಡಾಗಿರುವ ಶ್ರೀನಿವಾಸ್ ಅವರಿಗ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂತಾಪ ಸೂಚಿಸಿದರು.
2017: ಪುಣೆ: ಭಾರತದ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಅವರ ದಾಖಲೆಯನ್ನು ಅಲ್ರೌಂಡರ್ ಆರ್.ಅಶ್ವಿನ್ ಮುರಿದರು.  ಸ್ವದೇಶದಲ್ಲಿ ಆಡಿದ 10 ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಅಶ್ವಿನ್ ಪಾಲಾಯಿತು. ಪುಣೆಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದ 2ನೇ ದಿನ ಮಿಚೆಲ್ ಸ್ಟಾರ್ಕ್ ವಿಕೆಟ್ ಕಬಳಿಸುವುದರೊಂದಿಗೆ 64 ವಿಕೆಟ್ಗಳನ್ನು ಗಳಿಸಿ ಕಪಿಲ್ ಅವರ ದಾಖಲೆಯನ್ನು ಮುರಿದರು. ಭಾರತ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರ ಸ್ವದೇಶಗಳಲ್ಲಿ ನಡೆದ ಟೆಸ್ಟ್ ಸರಣಿಗಳ 13 ಪಂದ್ಯಗಳಲ್ಲಿ 63 ವಿಕೆಟ್ ಪಡೆದು ಅತಿಹೆಚ್ಚು ವಿಕೆಟ್ ಗಳಿಸಿದ ಸಾಧನೆ ಮಾಡಿದ್ದರು.
2017: ಬೀಜಿಂಗ್: ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ತಜ್ಞರನ್ನು ನಿರ್ಲಕ್ಷಿಸುವ ಮೂಲಕ ಚೀನಾ ತಪ್ಪೆಸಗಿದೆ ಎಂದು ಚೀನಾದ ಅಧಿಕೃತ ಮಾಧ್ಯಮ ಸರ್ಕಾರಿ ಸ್ವಾಮ್ಯದಗ್ಲೋಬಲ್ ಟೈಮ್್ಸಹೇಳಿತು  ಕಮ್ಯೂನಿಸ್ಟ್ ರಾಷ್ಟ್ರವು ತನ್ನ ಅವಿಷ್ಕಾರ ಸಾಮರ್ಥ್ಯನ್ನು ಉಳಿಸಿಕೊಳ್ಳಲು ಅತ್ಯುನ್ನತ ತಂತ್ರಜ್ಞಾನದ ಭಾರತೀಯ ಪ್ರತಿಭೆಗಳನ್ನು ಆಕರ್ಷಿಸುವ ಅಗತ್ಯ ಇದೆ ಎಂದು ಪತ್ರಿಕೆ ಅಭಿಪ್ರಾಯ ಪಟ್ಟಿತು. ಭಾರತೀಯ ಪ್ರತಿಭೆಯನ್ನು ನಿರ್ಲಕ್ಷಿಸುವ ಮೂಲಕ ಚೀನಾ ತಪ್ಪೆಸಗಿದೆ. ಬದಲಾಗಿ ಅಮೆರಿಕ ಮತ್ತು ಯುರೋಪಿನ ಪ್ರತಿಭೆಗಳಿಗೆ ಹೆಚ್ಚಿನ ಮಹತ್ವ ನೀಡಿದೆ’. ಭಾರತದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿಭೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಚೀನಾ ಬಹುಶಃ ಏನೂ ಕೆಲಸ ಮಾಡುತ್ತಿಲ್ಲ ಎಂದುಗ್ಲೋಬಲ್ ಟೈಮ್್ಸ ಹೇಳಿತು. ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚು ಕಡಿಮೆ ಪ್ರತಿದಿನವೂ ಭಾರತವನ್ನು ಟೀಕಿಸುವ ಲೇಖನಗಳನ್ನೇ ಪ್ರಕಟಿಸುತ್ತಾ ಬಂದಿದ್ದಗ್ಲೋಬಲ್ ಟೈಮ್್ಸ ಅಪರೂಪಕ್ಕೆ ಧನಾತ್ಮಕ ಬರಹವನ್ನು ಪ್ರಕಟಿಸಿತು. ಕಳೆದ ಕೆಲವು ವರ್ಷಗಳಲ್ಲಿ ಚೀನಾವು ತಾಂತ್ರಿಕ ಉದ್ಯೊಗ ಕ್ಷೇತ್ರದಲ್ಲಿ ಅಭೂತಪೂರ್ವ ಸದ್ದು ಮಾಡಿದೆ. ಜತೆಗೇ ವಿದೇಶೀ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ಆಕರ್ಷಿಸಿದೆ. ಆದರೆ ಈಗ ಕೆಲವು ಉನ್ನತ ತಂತ್ರಜ್ಞಾನ ಸಂಸ್ಥೆಗಳು ಚೀನಾದ ಬದಲು ಭಾರತದತ್ತ ಮುಖಮಾಡಿವೆ. ಇದಕ್ಕೆ ಭಾರತದಲ್ಲಿ ಕಾರ್ವಿುಕ ವೆಚ್ಚ ಕಡಿಮೆಯಾಗಿರುವುದು ಕಾರಣ. ತನ್ನ ಸಂಶೋಧನಾ ಸಾಮರ್ಥ್ಯನ್ನು ಉಳಿಸಿಕೊಳ್ಳಲು ಚೀನಾಕ್ಕೆ ಇರುವ ಹಲವು ಮಾರ್ಗಗಳಲ್ಲಿ ಒಂದು ಉತ್ತಮ ಮಾರ್ಗ ಭಾರತದ ಉನ್ನತ ತಂತ್ರಜ್ಞಾನ ಪ್ರತಿಭೆಗಳನ್ನು ಆಕರ್ಷಿಸುವುದು ಎಂದು ಪತ್ರಿಕೆ ಹೇಳಿತು. 
2009: ಕರ್ನಾಟಕದ ಗುಲ್ಬರ್ಗ ಸೇರಿದಂತೆ ದೇಶದಲ್ಲಿ ಹೊಸದಾಗಿ 12 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಸಂಬಂಧ ರೂಪಿಸಲಾದ ಮಸೂದೆಗೆ ರಾಜ್ಯಸಭೆಯೂ ತನ್ನ ಸಮ್ಮತಿ ಸೂಚಿಸುವುದರೊಂದಿಗೆ ಮಸೂದೆಗೆ ಸಂಸತ್‌ನ ಅಂಗೀಕಾರ ದೊರಕಿತು. ಲೋಕಸಭೆಯು ಹಿಂದಿನ ವಾರವೇ ಮಸೂದೆಗೆ ಅಂಗೀಕಾರ ನೀಡಿತ್ತು.

2009: ಹೈಕೋರ್ಟ್‌ನಲ್ಲಿ ತಮ್ಮ ವಿರುದ್ಧ ಬಂದಂತಹ ತೀರ್ಪುಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೇಲ್ಮನವಿ ಸಲ್ಲಿಸುವಾಗ ತೋರುವ ಅಸಡ್ಡೆಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವ ಮೇಲ್ಮನವಿಗಳನ್ನು ನಿಗದಿತ ಸಮಯದಲ್ಲಿ (ಎಸ್‌ಎಲ್‌ಪಿ) ಸಲ್ಲಿಸದೆ ತಿಂಗಳುಗಟ್ಟಲೆ ವಿಳಂಬ ಮಾಡುತ್ತಿರುವುದು ಹಾಗೂ ದೋಷಪೂರಿತ ದಾವಾಗಳನ್ನು ಬರೆಯುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ ಎಂದು ನ್ಯಾಯಮೂರ್ತಿಗಳಾದ ಆರ್.ವಿ.ರವೀಂದ್ರನ್ ಹಾಗೂ ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್ ಅವರನ್ನೊಳಗೊಂಡ ಪೀಠವು ಹೇಳಿತು. ರೈತನೊಬ್ಬನಿಗೆ ಪರಿಹಾರ ವಿತರಿಸುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ ಈ ಮೇಲ್ಮನವಿ ಅನೇಕ ತಪ್ಪು ಹಾಗೂ ಗಂಭೀರವಾದ ಮೂಲ ದೋಷಗಳನ್ನು ಒಳಗೊಂಡಿತ್ತು. ಈ ಮೇಲ್ಮನವಿಯನ್ನು ಫೆಬ್ರುವರಿ 9ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಮುನ್ನ ದಾವೆ ಮತ್ತು ದಾಖಲೆಗಳನ್ನು ವಿಶೇಷ ವಕೀಲರ ಮೂಲಕ ಸೂಕ್ತವಾಗಿ ಪರಾಮರ್ಶಿಸಬೇಕು ಎಂಬ ನಿಯಮವಿದೆ. ಇದಕ್ಕಾಗಿ ಕಠಿಣ ಪರೀಕ್ಷೆ ಎದುರಿಸಬೇಕಾಗುತ್ತದೆ. ಆದರೆ ಇಂತಹ ಹಂತಗಳನ್ನೂ ದಾಟಿ ಒಂದು ದಾವೆ ಇಷ್ಟೊಂದು ತಪ್ಪುಗಳ ಮೂಲಕ ಪೀಠದೆದುರು ವಿಚಾರಣೆಗೆ ಬರುತ್ತದೆ ಎಂದರೆ ಏನರ್ಥ? ಪರಾಮರ್ಶೆಯ ವಕೀಲರ ತಂಡ ಇರುವುದಾದರೂ ಏತಕ್ಕೆ ಎಂದು ಸುಪ್ರೀಂಕೋರ್ಟ್ ಖಾರವಾಗಿ ಪ್ರಶ್ನಿಸಿತು. ರಾಜ್ಯ ಸರ್ಕಾರಗಳು ತಮ್ಮ ವಿರುದ್ಧ ಬರುವ ಎಲ್ಲ ತೀರ್ಪುಗಳನ್ನೂ ಪ್ರಶ್ನಿಸುವುದು ಸಾಮಾನ್ಯವಾಗಿ ಹೋಗಿದೆ. ಅಷ್ಟೇ ಅಲ್ಲ ತಿಂಗಳುಗಟ್ಟಲೆ ವಿಳಂಬ ಎಸಗುವುದು ಅವುಗಳಿಗೆ ಅಭ್ಯಾಸವಾಗಿಬಿಟ್ಟಿದೆ. ಸುಪ್ರೀಂಕೋರ್ಟಿನಲ್ಲಿ ಸದ್ಯ ಇರುವ ಮೇಲ್ಮನವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ರಾಜ್ಯ ಮತ್ತು ಕೇಂದ್ರ ಸರ್ಕಾರಗಳದ್ದೇ ಆಗಿವೆ. ಇವುಗಳಲ್ಲಿ ಶೇಕಡಾ 90 ರಷ್ಟು ಮೇಲ್ಮನವಿಗಳು ವಿಳಂಬಿತ ಮನವಿಗಳು. ಆಡಳಿತಾತ್ಮಕ ಕಾರಣ, ಸರ್ಕಾರದ ವಿಧಿವಿಧಾನಗಳ ಪೂರೈಕೆ ಇತ್ಯಾದಿಗಳ ಕಾರಣ ನೀಡಿ ಕ್ಷಮೆ ಯಾಚಿಸುತ್ತಾ ಬರುವ ಈ ಮೇಲ್ಮನವಿಗಳು ತಮಗೆ ನಿಗದಿಪಡಿಸಲಾಗಿರುವ ಮಿತಿಯನ್ನು ಅಣಕ ಮಾಡುತ್ತಿರುವಂತಿವೆ. ಸಂವಿಧಾನದ 136ನೇ ವಿಧಿಯ ಅನುಸಾರ ನೀಡಲಾಗಿರುವ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ಎಲ್ಲರೂ ಸುಲಭವಾಗಿ ಪರಿಗಣಿಸಿಬಿಟ್ಟಿದ್ದಾರೆ. ಅದರ ಗಂಭೀರತೆಯನ್ನೇ ಗಮನದಲ್ಲಿ ಇರಿಸಿಕೊಂಡಂತಿಲ್ಲ ಎಂದು ಪೀಠವು ವಿವರಿಸಿತು.

2009: ಪಂಜಾಬ್ ಪ್ರಾಂತ್ಯದ ಚಕ್ವಾಲ್‌ನ ಪ್ರಸಿದ್ಧ ಕಟಾಸ್ ರಾಜ್ ದೇವಸ್ಥಾನವನ್ನು ಪುನರ್ ನವೀಕರಣಗೊಳಿಸುವಂತೆ ಧಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸಂಸದೀಯ ವ್ಯವಹಾರ ಖಾತೆ ಸಚಿವ ಬಿ. ಆವನ್ ಸೂಚಿಸಿದರು. ಇಸ್ಲಾಮಾಬಾದ್ ದೇವಸ್ಥಾನಕ್ಕೆ ಭೇಟಿ ನೀಡಿ ಇಲ್ಲಿನ ಶಿಲ್ಪಕಲೆ ಹಾಗೂ ವಿನ್ಯಾಸಕ್ಕೆ ಮನಸೋತ ಸಚಿವರು, ಇದು ಪಾರಂಪರಿಕ ಮಹತ್ವದ್ದಾಗಿದ್ದು, ಇದರ ಸುತ್ತಲೂ ಗೋಡೆ ನಿರ್ಮಿಸುವ ಮೂಲಕ ದೇವಸ್ಥಾನವನ್ನು ರಕ್ಷಿಸಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ದೇವಸ್ಥಾನದ ಅಭಿವೃದ್ಧಿಗೆ 109 ಕೋಟಿ ಅನುದಾನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು ನಂತರ ಅವರು ಯೋಜನೆಯ ಪ್ರಗತಿಯ ಬಗ್ಗೆ ಪರಿಶೀಲಿಸಿದರು. ಇಸ್ಲಾಮ್ ಒಂದು ಪವಿತ್ರ ಧರ್ಮ ಇದು ಬೇರೆ ಧರ್ಮದವರನ್ನು ಕೂಡ ಗೌರವಿಸುತ್ತದೆ ಎಂದು ಸಚಿವರು ತಿಳಿಸಿದರು.

2008: ಆರು ತಿಂಗಳ ಅವಧಿಯಲ್ಲಿ ದೇಶದ 800 ರೈತರು ಆತ್ಮಹತ್ಯೆ ಮಾಡಿಕೊಂಡರು. ಇದರಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು ಅಂದರೆ 607 ರೈತರನ್ನು ಕಳೆದುಕೊಂಡಿತು. ಆಂಧ್ರದ 114 ಮತ್ತು ಕರ್ನಾಟಕದ 73 ರೈತರು ಆತ್ಮಹತ್ಯೆ ಮಾಡಿಕೊಂಡರು. ಕೇರಳದಲ್ಲಿ 13 ರೈತರು ನೇಣಿಗೆ ಶರಣಾದರು ಎಂದು ವರದಿಯೊಂದು ಬಹಿರಂಗಪಡಿಸಿತು. ಪಂಜಾಬ್, ಹರಿಯಾಣ, ದೆಹಲಿ, ಗುಜರಾತ್, ರಾಜಸ್ಥಾನ, ಗೋವಾ ರಾಜ್ಯಗಳು ಈ ಸಂಬಂಧ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿತು. ಪರಿಹಾರ ಕ್ರಮವಾಗಿ ಕೇಂದ್ರ ಸರ್ಕಾರ ಈತನಕ ಆಂಧ್ರದ 16 ಜಿಲ್ಲೆಗಳಿಗೆ 9650 ಕೋಟಿ ಬಿಡುಗಡೆ ಮಾಡಿದೆ. ಕರ್ನಾಟಕದ 6 ಜಿಲ್ಲೆಗಳಲ್ಲಿ 2389.64 ಕೋಟಿ, ಕೇರಳದ 3 ಜಿಲ್ಲೆಗಳಲ್ಲಿ 765.24 ಕೋಟಿ ಮತ್ತು ಮಹಾರಾಷ್ಟ್ರದ 6 ಜಿಲ್ಲೆಗಳಲ್ಲಿ ರೂ 3879.26 ಕೋಟಿ ಹಣ ಕೇಂದ್ರದಿಂದ ಬಿಡುಗಡೆ ಆಗಿದೆ ಎಂದು ವರದಿ ಹೇಳಿತು.

2008: ಕರ್ನಾಟಕ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟ ಹಾಗೂ ಇತರೆ ಸಂಘಟನೆಗಳ ಕರೆಯ ಮೇರೆಗೆ ಆರಂಭವಾದ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿತು.

2008: ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಸೂಕ್ತ ಭದ್ರತೆ ನೀಡಲಾಗುತ್ತದೆ ಎಂದು ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್. ತರಕನ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ (ಬಿಎಂಸಿಆರ್ಐ) ವ್ಯಾಪ್ತಿಯ ಐದು ಆಸ್ಪತ್ರೆಗಳ ಕಿರಿಯ ವೈದ್ಯರು ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡರು.

2008: ಮರಾಠಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿರುವ ಕರ್ನಾಟಕ-ಮಹಾರಾಷ್ಟ್ರ ಗಡಿಯ 814 ಗ್ರಾಮಗಳು ಕರ್ನಾಟಕಕ್ಕೇ ಸೇರುವುದು ಸೂಕ್ತ ಎಂಬುದನ್ನು ರಾಜ್ಯ ಪುನರ್ ವಿಂಗಡಣಾ ಆಯೋಗ (ಎಸ್ ಆರ್ ಸಿ) ಸಮರ್ಥಿಸಿತ್ತು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿತು. ಈ ಹಳ್ಳಿಗಳಲ್ಲಿ ಇರುವ ಜನರ ಒಳಿತಿನ ದೃಷ್ಟಿಯಿಂದ ಇವು ಕರ್ನಾಟಕಕ್ಕೇ ಸೇರಬೇಕು ಎನ್ನುವುದು ಆಯೋಗದ ಸ್ಪಷ್ಟ ಅಭಿಪ್ರಾಯವಾಗಿತ್ತು ಎಂದೂ ಕೇಂದ್ರ ಹೇಳಿತು. 2006ರ ನವೆಂಬರ್ 16ರಂದು ಅಂದಿನ ಸಾಲಿಸಿಟರ್ ಜನರಲ್ ಜಿ.ಇ. ವಹನ್ವತಿ ಅವರು ಸಿದ್ಧಪಡಿಸಿದ ದಾಖಲೆಗಳ ಆಧಾರದಲ್ಲಿ ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಈ ಅಂಶಗಳನ್ನು ಸ್ಪಷ್ಟಪಡಿಸಲಾಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವು ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರ ಪೀಠದ ಮುಂದೆ ಮಾರ್ಚ್ 25ರಂದು ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ಈ ಪ್ರಮಾಣಪತ್ರಕ್ಕೆ ಹೆಚ್ಚಿನ ಮಹತ್ವ ಬಂದಿತು.

2008: ಜರ್ಮನಿಯ ನಿರಂಕುಶ ದೊರೆ ರಕ್ತಪಿಪಾಸು ಅಡಾಲ್ಫ್ ಹಿಟ್ಲರ್ ಒಬ್ಬ ಚಿತ್ರ ಕಲಾವಿದನಾಗಿಯೂ ತನ್ನ ರಸಿಕತೆ ಮೆರೆದಿದ್ದ ಎಂಬುದಾಗಿ ನಾರ್ವೆ ಹೇಳಿತು. ರಕ್ತಕಾರಂಜಿಯ ವರ್ಣಗಳುಳ್ಳ ವ್ಯಂಗ್ಯ ಚಿತ್ರಗಳು ಹಾಗೂ ಅಣಕು ಚಿತ್ರಗಳನ್ನು ಆತ ರಚಿಸಿದ್ದ. ಹಿಟ್ಲರ್ ರಚಿಸಿದ ಚಿತ್ರಗಳು ತನ್ನ ಬಳಿ ಇವೆ ಎಂದು ನಾರ್ವೆ ಯುದ್ಧ ವಸ್ತುಸಂಗ್ರಹಾಲಯದ ನಿರ್ದೇಶಕ ಹ್ಯಾಕ್ ವಾಗ್ ಬಹಿರಂಗಪಡಿಸಿದರು.

2008: ವಿಪ್ರೊ ಲಿಮಿಟೆಡ್, ತನ್ನ ಜಾಗತಿಕ ಸೇವಾ ಕೇಂದ್ರಗಳನ್ನು ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಆರಂಭಿಸಿತು. ಏಷ್ಯಾ ಪೆಸಿಫಿಕ್ ವಿಪ್ರೊದ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ ಈ ಕೇಂದ್ರ ವಿವಿಧ ಭಾಷೆಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವುದು ಎಂದು ವಿಪ್ರೊ ಇನ್ಫೊಟೆಕ್ ನ ವೃತ್ತಿಸೇವಾ ವಿಭಾಗದ ಮುಖ್ಯಸ್ಥ ತಾಂಡವ ಮೂರ್ತಿ ತಿಳಿಸಿದರು.

2007: ಮಣಿಪುರದ ಬಿಷನ್ ಪುರ ಜಿಲ್ಲೆಯಲ್ಲಿ ಉಗ್ರಗಾಮಿಗಳು ಚುನಾವಣಾ ಕರ್ತವ್ಯದಲ್ಲಿದ್ದ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ ಕನಿಷ್ಠ 16 ಯೋಧರನ್ನು ಹತ್ಯೆ ಮಾಡಿ, ಐವರನ್ನು ಗಾಯಗೊಳಿಸಿದರು.

2007: ಶಿರಸಿಯ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರನ್ನು ಅಗ್ನಿ ಸೇವಾ ಟ್ರಸ್ಟ್ ನೀಡುವ ಪ್ರತಿಷ್ಠಿತ ಪರಮದೇವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಯಕ್ಷಗಾನಕ್ಕಾಗಿ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟ ಹೊಸ್ತೋಟ ಅವರ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳನ್ನು ಆಧರಿಸಿ ಸುಮಾರು 95ಕ್ಕೂ ಹೆಚ್ಚು ಪ್ರಸಂಗ, ಪರಿಸರ ಹಾಗೂ ಸಾಮಾಜಿಕ ವಿಷಯಕ್ಕೆ ಸಂಬಂಧಿಸಿದ 150ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

2007: ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ 2006ನೇ ಸಾಲಿನ ಪ್ರಶಸ್ತಿಗೆ ಕಥೆಗಾರ ಕುಂ. ವೀರಭದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು.

2007: ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷಗಳ ಮುಖಂಡರ ಸಭೆಯು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ಸಭೆಯು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿತು.

2007: ಫನಾ ಮತ್ತು ಧೂಮ್-2 ಬಾಲಿವುಡ್ ಚಿತ್ರಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಕಾಜೋಲ್ ಮತ್ತು ಹೃತಿಕ್ ರೋಷನ್ ಅವರಿಗೆ ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಫಿಲಂಫೇರ್ ಶ್ರೇಷ್ಠ ನಟಿ ಮತ್ತು ನಟ ಪ್ರಶಸ್ತಿ ನೀಡಲಾಯಿತು.

2007: ಜಾರ್ಖಂಡ್ ರಾಜ್ಯವು ರಾಜಕೀಯ ಕ್ಷೇತ್ರದಲ್ಲಿ 2002ರಿಂದ 2007ರವರೆಗಿನ ಅವದಿಯಲ್ಲಿ ಸುಮಾರು 156ಕ್ಕೂ ಹೆಚ್ಚು ದಾಖಲೆಗಳನ್ನು ಮಾಡಿದ್ದಕ್ಕಾಗಿ ಲಿಮ್ಕಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಯಿತು. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸಂಪಾದಕ ವಿಜಯ ಘೋಷ್ ಅವರ ಸಹಿಯನ್ನು ಒಳಗೊಂಡ ದಾಖಲೆ ಸಂಬಂಧಿ ಪ್ರಮಾಣಪತ್ರವನ್ನು ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಲಿಮ್ಕಾ ಪ್ರತಿನಿಧಿಗಳು ನೀಡಿದರು. `ಜಾರ್ಖಂಡಿನ ಮಧು ಕೋಡಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊತ್ತ ಮೊದಲ ಸ್ವತಂತ್ರ ಅಭ್ಯರ್ಥಿ. 2006ರ ಸೆಪ್ಟೆಂಬರ್ 18ರಂದು ಅವರು ಯುಪಿಎ ಮತ್ತು ನಾಲ್ವರು ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ ರಚನೆಯಾದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು' ಎಂದು ಲಿಮ್ಕಾ ಪ್ರತಿನಿಧಿಗಳು ಕೋಡಾ ಅವರಿಗೆ ನೀಡಿದ ಪ್ರಮಾಣ ಪತ್ರ ಹೇಳಿದೆ.

2006: ಸಂಸ್ಕತ ಭಾರತಿ ಸಂಘಟನೆಯು ಸಂಸ್ಕತ ಸಂಭಾಷಣಾ ಶಿಬಿರ ವರ್ಷವನ್ನು ಆರಂಭಿಸಿತು. (24 ಫೆಬ್ರುವರಿ 2006ರಿಂದ 2007 ಮೇವರೆಗೆ)

2006: ಫಿಲಿಪ್ಪೀನ್ಸ್ ಅಧ್ಯಕ್ಷೆ ಗ್ಲೋರಿಯಾ ಅರೋಯೋ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ತಮ್ಮ ಸರ್ಕಾರ ಉರುಳಿಸಲು ಸಂಚು ರೂಪಿಸಿದ ಆಪಾದನೆಯಲ್ಲಿ ಸೇನಾಪಡೆಯ ಪ್ರಮುಖ ಅಧಿಕಾರಿಗಳನ್ನು ಬಂಧಿಸಲು ಆಜ್ಞಾಪಿಸಿದರು.

2006: ಭಾರತದ ಖ್ಯಾತ ಪರಮಾಣು ವಿಜ್ಞಾನಿ ಗೋವರ್ಧನ್ ಮೆಹ್ತಾ ಅವರಿಗೆ ತಮ್ಮ ದೇಶದಲ್ಲಿ ಸಂಚರಿಸಲು ಅಮೆರಿಕ ವಿದೇಶಾಂಗ ಸಚಿವಾಲಯ ಅನುಮತಿ ನೀಡಿತು. ಗೋವರ್ಧನ್ ಅವರಿಗೆ ವೀಸಾ ನಿರಾಕರಿಸಲಾಗಿದೆ ಎಂಬ ವರದಿಗಳಿಂದ ಉಂಟಾಗಿದ್ದ ಬಿಕ್ಕಟ್ಟು ಇದರಿಂದಾಗಿ ಪರಿಹಾರಗೊಂಡಿತು.

2006: ಗೋಧ್ರಾ ರೈಲು ದುರಂತದ ನಂತರ ಸಂಭವಿಸಿದ ಹಿಂಸಾಚಾರದಲ್ಲಿ ಭಸ್ಮವಾದ ಬೆಸ್ಟ್ ಬೇಕರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಸೆಷನ್ಸ್ ನ್ಯಾಯಾಲಯವು 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ದುಷ್ಕರ್ಮಿಗಳು 2002ರ ಮಾರ್ಚ್ 1ರಂದು ವಡೋದರಾದಲ್ಲಿನ ಬೆಸ್ಟ್ ಬೇಕರಿಗೆ ಬೆಂಕಿ ಹಚ್ಚಿದಾಗ 14 ಜನ ಸಜೀವ ದಹನಗೊಂಡಿದ್ದರು.

2006: ಅನುವಾದ ಅಕಾಡೆಮಿಯು ತಮಗೆ ನೀಡಿದ ಪ್ರಶಸ್ತಿಯನ್ನು ವಾಪಸ್ ಮಾಡಿ ದೇ. ಜವರೇಗೌಡ ಅವರು ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ಅವರಿಗೆ ಪತ್ರ ಬರೆದರು. ಅಕಾಡೆಮಿ ಸ್ಥಾಪನೆಗೆ 30 ವರ್ಷ ಏಕಾಂಗಿಯಾಗಿ ದುಡಿದಿದ್ದೇನೆ. ಈಗ ಪ್ರಶಸ್ತಿ ಒಪ್ಪಿಕೊಂಡರೆ ಟೀಕೆ, ವಿಮರ್ಶೆ ಶುರುವಾಗುತ್ತದೆ. ಆದ್ದರಿಂದ ಪ್ರಮಾಣಪತ್ರ ಸಾಕು, ಪ್ರಶಸ್ತಿ ಬೇಡ ಎಂದು ದೇಜಗೌ ತಿಳಿಸಿದರು.

1948: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜನ್ಮದಿನ.

1946: ಜುವಾನ್ ಪೆರೋನ್ ಅವರು ಅರ್ಜೆಂಟೀನಾದ ಅಧ್ಯಕ್ಷರಾಗಿ ಆಯ್ಕೆಯಾದರು.

1945: ಈಜಿಪ್ಟಿನ ಪ್ರಧಾನಿ ಮಹೆರ್ ಪಾಶಾ ಅವರನ್ನು ಸಂಸತ್ತಿನಲ್ಲಿ ಜರ್ಮನಿ, ಮತ್ತು ಜಪಾನ್ ವಿರುದ್ಧದ ಸಮರಘೋಷಣೆ ಓದುತ್ತಿದ್ದಾಗ ಗುಂಡು ಹೊಡೆದು ಕೊಲ್ಲಲಾಯಿತು.

1942: ಭಾರತೀಯ ಸಂಜಾತೆ ಗಾಯತ್ರಿ ಚಕ್ರವರ್ತಿ ಸ್ಪಿವಕ್ ಜನಿಸಿದರು. ಈಕೆ ಲೇಖಕಿ, ಸಾಹಿತ್ಯ ವಿಮರ್ಶಕಿ, ಹಾಗೂ ಭಾಷಾಂತರಕಾರ್ತಿಯಾಗಿ ಖ್ಯಾತಿ ಗಳಿಸಿದರು. ತತ್ವಜ್ಞಾನಿ ಜಾಕಿಸ್ ಡೆರ್ರಿಡಾ ಪುಸ್ತಕವನ್ನು ಇವರು ಇಂಗ್ಲಿಷಿಗೆ ಭಾಷಾಂತರಿಸಿದ್ದರು.

1938: ಟೂಥ್ ಬ್ರಶ್ ಗಳು ನ್ಯೂಜೆರ್ಸಿಯ ಅರ್ಲಿಂಗ್ಟನ್ನಿನಲ್ಲಿ ಮೊತ್ತ ಮೊದಲ ಬಾರಿಗೆ ವಾಣಿಜ್ಯ ಮಟ್ಟದಲ್ಲಿ ಉತ್ಪಾದನೆಯಾದವು.

1936: ಖ್ಯಾತ ಮರಾಠಿ ಕವಿ ಲಕ್ಷ್ಮೀಬಾಯಿ ತಿಲಕ್ ನಿಧನರಾದರು.

1934: ಬೆಂಡೆಟ್ಟೋ `ಬೆಟ್ಟಿನೊ' ಕ್ರಾಕ್ಸಿ ಹುಟ್ಟಿದ ದಿನ. ಇಟಲಿಯ ರಾಜಕಾರಣಿಯಾದ ಇವರು 1983-87ರ ಅವಧಿಯಲ್ಲಿ ರಾಷ್ಟ್ರದ ಮೊತ್ತ ಮೊದಲ ಸಮಾಜವಾದಿ ಪ್ರಧಾನಿಯಾಗಿದ್ದರು.

1920: ನಾನ್ಸಿ ಆಸ್ಟೊರ್ ಜನಿಸಿದರು. ಈಕೆ ಬ್ರಿಟಿಷ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಥಮ ಮಹಿಳೆ.

1825: ಇಂಗ್ಲಿಷ್ ಸಂಪಾದಕ ಥಾಮಸ್ ಬೌಲ್ಡರ್ (1754-1825) ನಿಧನರಾದರು. ಷೇಕ್ಸ್ ಪಿಯರ್, ಓಲ್ಡ್ ಟೆಸ್ಟಾಮೆಂಟ್ ಸೇರಿದಂತೆ ಹಲವು ಕೃತಿಗಳನ್ನು ಇವರು ಸಂಪಾದಿಸಿದ್ದರು.

1582: ಪೋಪ್ ಗ್ರೆಗೊರಿ ಅವರು `ಗ್ರೆಗೋರಿಯನ್ ಕ್ಯಾಲೆಂಡರ್' ಗೆ ಸಮ್ಮತಿ ನೀಡಿ ಅಧಿಕೃತ ಪ್ರಕಟಣೆ ನೀಡಿದರು. ಈ ಕ್ಯಾಲೆಂಡರ್ ಇಟಲಿ ಮತ್ತು ಸ್ಪೇನಿನಲ್ಲಿ ಅಕ್ಟೋಬರ್ 15ರಂದು ಅನುಷ್ಠಾನಕ್ಕೆ ಬಂದಿತು.

1304: ಇಬ್ನ್ ಬಟೂಟ ಹುಟ್ಟಿದ. (1304-1368/69) ಈತ ಮಧ್ಯಯುಗದ ಖ್ಯಾತ ಅರಬ್ ಪ್ರವಾಸಿ ಎಂಬುದಾಗಿ ಹೆಸರು ಪಡೆದ.

No comments:

Post a Comment